Showing posts with label ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ janakiramana. Show all posts
Showing posts with label ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ janakiramana. Show all posts

Monday, 6 September 2021

ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ ankita janakiramana

 ರಾಗ: ಶಂಕರಾಭರಣ ತಾಳ: ಆದಿ


ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ


ದೀನಸೇವಕನ ಮನ್ನಿಸಬೇಕೆಂದು ನಾಬೇಡುವೆ ನಿಮಗಿಂದು ಅ. ಪ


ದೂರದೇಶದಿಂದ ಬಳಲಿ ತೊಳಲಿ ಬಂದೆ ನಿಮ್ಮೆದುರಲಿ ನಿಂದು

ಹರುಷದಿಂದಲಿ ಎನ್ನ ಕರುಣಿಸು ನೀ ತಂದೆ ಏಕಿಲ್ಲಿ ಕರತಂದೆ

ಶರಣಾಗತರನು ಪೊರೆವ ಬಿರುದು ಪೊತ್ತು ಬೇಡಿದವರವಿತ್ತು

ವರಮಂತ್ರಾಲಯ ಪುರದೊಳು ಮೆರೆಯುತ್ತ ಮಹಿಮೆಯ ತೋರುತ್ತ 1

ನದಿಯಲಿ ಇಂದು ಮಿಂದು ಬಂದೆ ನಾನು ಭಕುತರಸುರಧೇನು

ಮೋದದಿಂದಲಿ ನಿಮ್ಮ ಸ್ತೋತ್ರವ ಪಠಿಸಿದೆನು ವಂದನೆಮಾಡಿದೆನು

ಚಂದದಿತೋರಿಂದು ಸುಂದರ ಪಾದವನು ಭಕುತಿಲಿ ನಮಿಸುವೆನು

ನೊಂದಮನುಜರ ಪೊರೆಯುವ ದೊರೆಯೆಂದು ನಾ ಪೊಗಳುವೆ 

ನಿಮಗಿಂದು 2

ಖೂಳರಕ್ಕಸನ ಉದರದಲಿ ಜನಿಸಿ ಹರಿಭಕ್ತಿಯಗಳಿಸಿ

ಎಲ್ಲಿ ನೋಡಿದರಲ್ಲಿ ನಿಮ್ಮ ಮಹಿಮೆ ತೋರುವುದೇ ಬಲುಹಿರಿಮೆ

ಕಲಿಯುಗದಲಿ ಯತಿರೂಪದಿ ಅವತರಿಸಿ ಸದ್ಗ್ರಂಥಗಳರಚಿಸಿ

ಚಲುವ ಜಾನಕಿರಮಣನ ಪಾದಭಜಿಸಿ ಭಕುತರನುದ್ಧರಿಸಿ 3

****