Monday 6 September 2021

ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ ankita janakiramana

 ರಾಗ: ಶಂಕರಾಭರಣ ತಾಳ: ಆದಿ


ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ


ದೀನಸೇವಕನ ಮನ್ನಿಸಬೇಕೆಂದು ನಾಬೇಡುವೆ ನಿಮಗಿಂದು ಅ. ಪ


ದೂರದೇಶದಿಂದ ಬಳಲಿ ತೊಳಲಿ ಬಂದೆ ನಿಮ್ಮೆದುರಲಿ ನಿಂದು

ಹರುಷದಿಂದಲಿ ಎನ್ನ ಕರುಣಿಸು ನೀ ತಂದೆ ಏಕಿಲ್ಲಿ ಕರತಂದೆ

ಶರಣಾಗತರನು ಪೊರೆವ ಬಿರುದು ಪೊತ್ತು ಬೇಡಿದವರವಿತ್ತು

ವರಮಂತ್ರಾಲಯ ಪುರದೊಳು ಮೆರೆಯುತ್ತ ಮಹಿಮೆಯ ತೋರುತ್ತ 1

ನದಿಯಲಿ ಇಂದು ಮಿಂದು ಬಂದೆ ನಾನು ಭಕುತರಸುರಧೇನು

ಮೋದದಿಂದಲಿ ನಿಮ್ಮ ಸ್ತೋತ್ರವ ಪಠಿಸಿದೆನು ವಂದನೆಮಾಡಿದೆನು

ಚಂದದಿತೋರಿಂದು ಸುಂದರ ಪಾದವನು ಭಕುತಿಲಿ ನಮಿಸುವೆನು

ನೊಂದಮನುಜರ ಪೊರೆಯುವ ದೊರೆಯೆಂದು ನಾ ಪೊಗಳುವೆ 

ನಿಮಗಿಂದು 2

ಖೂಳರಕ್ಕಸನ ಉದರದಲಿ ಜನಿಸಿ ಹರಿಭಕ್ತಿಯಗಳಿಸಿ

ಎಲ್ಲಿ ನೋಡಿದರಲ್ಲಿ ನಿಮ್ಮ ಮಹಿಮೆ ತೋರುವುದೇ ಬಲುಹಿರಿಮೆ

ಕಲಿಯುಗದಲಿ ಯತಿರೂಪದಿ ಅವತರಿಸಿ ಸದ್ಗ್ರಂಥಗಳರಚಿಸಿ

ಚಲುವ ಜಾನಕಿರಮಣನ ಪಾದಭಜಿಸಿ ಭಕುತರನುದ್ಧರಿಸಿ 3

****


No comments:

Post a Comment