Monday, 6 September 2021

ಎಂದು ಕಾಂಬೆ ಶ್ರೀ ಗುರುವರರ ಎಂದು ಕಾಂಬೆ ankita janakiramana

 ರಾಗ: ಭೈರವಿ ತಾಳ: ಅಟ


ಎಂದು ಕಾಂಬೆ ಶ್ರೀ ಗುರುವರರ ಎಂದು ಕಾಂಬೆ


ಎಂದು ಕಾಂಬೆ ನಿಮ್ಮ ಸುಂದರ ಚರಣವ

ಅಂದಿನ ಸುಖ ಪೊಂದಿ ನಾ ಧನ್ಯನಾಗುವೆ ಅ. ಪ


ಪಿತನಿಂದತಿಕಷ್ಟ ಪಟ್ಟು ಪ್ರತಿಕೂಲ ಎಣಿಸದೆ

ಪಿತಗೆ ಶಿರಿಪತಿಯ ತೋರಿದ ಪ್ರಹ್ಲಾದರ 1

ಧರ್ಮರಕ್ಷಣೆಗಾಗಿ ಸಿಂಹಾಸನವನೇರಿ

ಕಾಮಿತಾರ್ಥವನಿತ್ತ ಶ್ರೀವ್ಯಾಸತೀರ್ಥರ 2

ಜಾನಕಿರಮಣ ಶ್ರೀಮೂಲರಾಮರ ಪಾದ 

ಧ್ಯಾನಮಾಳ್ವ ಶ್ರೀ ಗುರು ರಾಘವೇಂದ್ರರ 3

***


No comments:

Post a Comment