Showing posts with label ಏನು ಮಾಡಲಯ್ಯ ಬಯಲಾಸೆ ಬಿಡದು neleyadikeshava. Show all posts
Showing posts with label ಏನು ಮಾಡಲಯ್ಯ ಬಯಲಾಸೆ ಬಿಡದು neleyadikeshava. Show all posts

Tuesday, 15 October 2019

ಏನು ಮಾಡಲಯ್ಯ ಬಯಲಾಸೆ ಬಿಡದು ankita neleyadikeshava

ಮುಖಾರಿ ರಾಗ , ಝಂಪೆ ತಾಳ 

ಏನು ಮಾಡಲಯ್ಯ ಬಯಲಾಸೆ ಬಿಡದು
ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ||ಪ||

ಜ್ಯೋತಿಮಯವಾದ ದೀಪದ ಬೆಳಕಿಗೆ ತಾನು
ಕಾತುರದಿ ಬೀಳುವಾ ಪತಂಗದಂದದಲಿ
ಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವ
ಧೂರ್ತೆಯರ ನೋಡುವೀ ಚಕ್ಷುವಿಂದ್ರಿಯಕೆ ||೧||

ಅಂದವಹ ಸಂಪಿಗೆಯ ಅರಳ ಪರಿಮಳ ಉಂಡು
ಮುಂದುವರಿಯದೆ ಬೀಳ್ಪ ಮಧುಪನಂದದಲಿ
ಸಿಂಧುರದ ಗಮನೆಯರ ಸಿರಿಮುಡಿಯೊಳಿಪ್ಪ ಹೂ-
ಗಂಧ ವಾಸಿಸುವ ನಾಸಿಕದ ಇಂದ್ರಿಯಕೆ ||೨||

ಗಾಣದ ತುದಿಯೊಳಿರ್ಪ ಭೂನಾಗನಂ ಕಂಡು
ಪ್ರಾಣಾಹುತಿ ಎಂದು ಸವಿವ ಮೀನಂತೆ
ಏಣಾಕ್ಷಿಯರ ಚಂದುಟಿಯ ಸುಧೆಯ ಸವಿದು ತಾ
ಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ||೩||

ದಿಮ್ಮಿಡುವ ಗಣಗಣಾ ಎಂಬ ಘಂಟೆಯ ರವಕೆ
ಬೆಮೆಗೊಳುತ್ತಿರುವ ಆ ಹರಿಣನಂದದಲಿ
ರಮಣಿಯರ ರಂಜಿಕದ ನುಡಿಯನ್ನು ಕೇಳ್ದು ಪ್ರ-
ಣಮವೆಂದು ತೋಷಿಸುವ ಕರ್ಣೇಂದ್ರಿಯಕ್ಕೆ ||೪||

ತ್ವಕ್ಕು ಮೊದಲಾದ ಪಂಚೇಂದ್ರಿಯದೊಳು ಸಿಕ್ಕಿರೆ
ಕಕ್ಕುಲಿತೆಗೊಂಬುದಿದ ನೀನು ಬಿಡಿಸಯ್ಯ
ಸಿಕ್ಕು ಮಾಡಲಿ ಬೇಡ ನೆಲೆಯಾದಿಕೇಶವನೆ
ದಿ(/ರಿ?) ಕ್ಕಾಗಿ ಎನ್ನ ನಿನ್ನಂಘ್ರಿಯೊಳಗಿರಿಸೋ ||೫||
*******