..
ಆವನ ಭಯ ತನಭಾವದಿ ಗುರುಪದ ಸೇವಕನಾದವಗೆ ಪ
ಕೋವಿದ ಕುಲ ಸಂಭಾವಿತ ಗುರುವರ
ಕಾವನೆನುತ ಮನೋಭಾವದಲಿರುವವಗೆ
ಧಾರುಣಿಪತಿ ತನ್ನ ಸೇರದೆ ಪರಿಪರಿ
ಗಾರುಮಾಡಿದರೇನೂ
ಕ್ರೂರತನದಲಧಿಕಾರಿ ಜನಂಗಳು
ದೂರ ನೋಡಲೇನು
ನಾರಿ ತನುಜ ಪರಿವಾರದ ಜನರೂ
ಮೋರೆಗಾಣದಿರಲೇನೂ
ಘೋರ ಭಯ ಪರಿಹಾರಕ ನಮ್ಮ
ಧೀರ ಗುರುಪದ ಸೇರಿದ ನರನಿಗೆ 1
ಕಾಮಿತ ಫಲಪ್ರದ ಈ ಮಹಮಹಿಮನ
ನೇಮದಿ ಭಜಿಸುವಗೆ
ಆಮುಷ್ಮಿಕ ಸುಖ ಪ್ರೇಮದಿ ನೀಡುವ
ಕಾಮಧೇನು ನಂಬಿದಗೆ
ಧೀಮಂತರ ಮಹÀಸ್ತೋಮದಿ ನಮಿತನ
ನಾಮವ ಜಪಿಸುವಗೆ
ಈ ಮಹ ಸಾರ್ವಭೌಮನ ಪದಯುಗ
ತಾಮರಸವೆ ಹೃದ್ಯೋಮದಿ ನೆನೆವಗೆ 2
ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ
ನಾಥನ ಸ್ಮರಿಸುವಗೆ
ಭೂತ ಪ್ರೇತಭಯ ಘಾತಿಸಿ ನಿಜಸುಖ
ದಾತನ ಮೊರೆಪೊಕ್ಕವಗೆ
ಕಾತರ ಪಡುವ ಅನಾಥsÀರ ಪೊರೆವನ
ದೂತನಾದ ನರಗೆ
ದಾತ ಗುರುಜಗನ್ನಾಥ ವಿಠಲನ
ಪ್ರೀತಿಯಪಡೆದ್ಯತಿನಾಥನ ಭಜಿಪಗೆ 3
***