Showing posts with label ಸಾಗಿ ಬಾರೋ ಗುರು ರಾಘವೇಂದ್ರ ರಾಯ ವರ shyamasundara SAAGI BAARO GURU RAGHAVENDRA RAAYA VARA. Show all posts
Showing posts with label ಸಾಗಿ ಬಾರೋ ಗುರು ರಾಘವೇಂದ್ರ ರಾಯ ವರ shyamasundara SAAGI BAARO GURU RAGHAVENDRA RAAYA VARA. Show all posts

Saturday, 4 December 2021

ಸಾಗಿ ಬಾರೋ ಗುರು ರಾಘವೇಂದ್ರ ರಾಯ ವರ ankita shyamasundara SAAGI BAARO GURU RAGHAVENDRA RAAYA VARA



ಸಾಗಿ ಬಾರೋ ಗುರು ರಾಘವೇಂದ್ರರಾಯ ವರಸತ್ಕವಿಗೇಯಾ ||ಪ||

ಕೂಗುತ ಕರೆಯುತ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ||ಅಪ||

ಪಾವನ ಘನ ವೃಂದಾವನ ಮಂದಿರನೇ ಸದ್ಗುಣ ಬಂಧುರನೇ
ಪಾವಮಾನಿ ಮತ ಶರಧಿಗೆ ಚಂದಿರನೇ ದರಸಮ ಕಂದರನೇ
ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ ||೧||

ಶರಣು ಜನರು ಮೈ ಮರೆದು ಕರೆಯಲಾಗಿ ನಿಲ್ಲದೆ ವರಯೋಗಿ
ಭರದಿ ಬಂದು ಕರ ಪಿಡಿಯುವ ದೊರೆ ನೀನು ಎಂದರಿತೆವು ಸುರಧೇನು
ಕರುಣಾಕರ ಗತಿ ನಾಯಕ ನೀನೆಂದು ಭಜಿಪೆವು ದಯಾಸಿಂಧು ||೨||

ಶ್ಯಾಮಸುಂದರನ ಪ್ರೇಮ ಪಡೆದಾತ ಜಗದೊಳಗೆ ಪ್ರಖ್ಯಾತ
ನಿಯಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ
ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ ||೩||
***

sAgi bArO guru rAGavEMdrarAya varasatkavigEyA ||pa||

kUguta kareyuta BAgavatara moreya lAlisO munivarya ||apa||

pAvana Gana vRuMdAvana maMdiranE sadguNa baMdhuranE
pAvamAni mata Saradhige caMdiranE darasama kaMdaranE
ChAvaNipura sujanAvaLi kOrikeya gareyalu SuBakAya ||1||

SaraNu janaru mai maredu kareyalAgi nillade varayOgi
Baradi baMdu kara piDiyuva dore nInu eMdaritevu suradhEnu
karuNAkara gati nAyaka nIneMdu Bajipevu dayAsiMdhu ||2||

SyAmasuMdarana prEma paDedAta jagadoLage praKyAta
niyamadi Bajipara kAmita koDuvAta daiSika kulanAtha
hEmaSayya sukumAra mamateyiMda maMtrAlayadiMda ||3||
***

on ರಾಘವೇಂದ್ರ ಗುರುಗಳು
ಸಾಗಿ ಬಾರೋ ಗುರುರಾಘವೇಂದ್ರರಾಯ |
ವರ ಸತ್ಕಲುಗೇಯ ಪ

ಕೂಗುತ ಕರೆಯುವ ಭಾಗವತರ
ಮೊರೆಯ ಲಾಲಿಸೋ ಮುನಿವರ್ಯ ಅ.ಪ

ಪಾವನಘನ ವೃಂದಾವನ ಮಂದಿರನೆ
ಸದ್ಗುಣ ಬಂಧುರನೇ
ಪಾವಮಾನಿಮತಶರಧಿ ಚಂದಿರನೇ
ಧರಸಮ ಕಂದರನೇ
ಛಾವಣಿಪುರ ಸುಜನಾವಳಿ ಕೋರಿಕೆಯ
ಗರೆಯಲು ಶುಭಕಾಯ 1

ಶರಣಜನರು ಮೈಮರೆದು ಕರೆಯಲಾಗಿ
ನಿಲ್ಲದೆ ವರಯೋಗಿ |
ಭರದಿ ಬಂದು ಕರಪಿಡಿಯುವ
ಧೊರೆ ನೀನು ಎಂದರೀತೆವು ಸುರಧೇನು
ಕರುಣಾಕರ ಗತಿದಾಯಕ ನೀನೆಂದು
ಭಜಿಪೆವು ದಯಾಸಿಂಧು 2

ಶಾಮಸುಂದರನ ಪ್ರೇಮವ ಪಡೆದಾತ
ಜಗದೊಳು ಪ್ರಖ್ಯಾತ
ನೇಮದಿ ಭಜಿಪರ ಕಾಮಿತ ಕೊಡುವಾತ
ದೈಶಿಕ ಕುಲನಾಥ

ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
************