Showing posts with label ಶರಣನಾದೆ ನಾನು ನಿನಗೆ ಕರುಣ ದೇವನೇ govinda. Show all posts
Showing posts with label ಶರಣನಾದೆ ನಾನು ನಿನಗೆ ಕರುಣ ದೇವನೇ govinda. Show all posts

Sunday, 17 November 2019

ಶರಣನಾದೆ ನಾನು ನಿನಗೆ ಕರುಣ ದೇವನೇ ankita govinda

by ಗೋವಿಂದದಾಸ
ಶರಣನಾದೆ ನಾನು ನಿನಗೆ | ಕರುಣ ದೇವನೇ |ತರಳನನ್ನು ಕಾಯೋ ದಯದಿ | ಪರಮಪುರುಷನೇ ಪ 

ಸ್ನಾನ ದಾನ ಮೌನ ಮಂತ್ರ | ನಾನು ಅರಿಯೆನೆ |ಧ್ಯಾನ ದಾನ ತಿಳಿಯೆ ಸಲಹೊ | ಶ್ರೀನಿವಾಸನೆ1

ತರಳಧ್ರುವನ ತೆರದಿ ನಿನ್ನ | ಸ್ಮರಿಸಲರಿಯೆನೇ |ಗರುಡನಂತೆ ಹೊತ್ತು ಧರೆಂiÀi | ಚರಿಸಲಾರೆನೆ2

ಚಂದ್ರಧರನ ಸಖನೆ ಕಾಯೋ ಇಂದಿರೇಶನೇ |ಸುಂದರ ಗೋವಿಂದ ದಂiÀುದಿ |ಕರವಮುಗಿವೆನೆ3
******