..
kruti by shreeshapranesha vittala dasaru
ಶ್ರೀ ಗುರು ರಾಜರಿಗೆ ಆರುತಿ ಬೆಳಗಿರೆ ಪ
ಶ್ರೀ ರಾಘವೇಂದ್ರರಾಯಾ ಸೂರಿ ಪರಾಕೂ |ಪರಿಮಳ ವಿರಚಿಸಿದವನೆ ಪರಾಕು |ಧರೆಯೊಳು ಮಂತ್ರಾಲಯ ನಿಲಯ ಪರಾಕು |ಗುರು ವಸುಧೇಂದ್ರರ ಕುವರ ಪರಾಕೆಂದು |ಹರದೇರಾರುತಿಯಾ ಬೆಳಗಿರೆ 1
ದಂಡಕಮಂಡಲಧರ ಪರಾಕು |ಪಂಡಿತರೊಡೆಯ ವಿಕ್ರಮನೆ ಪರಾಕು |ಚಂಡ ದುರ್ವಾದಿ ಮತ ಮುರಿದ ಪರಾಕು |ಗಂಡುಗಲಿ ಹರಿಯಾ ಪರಾಕೆಂದು |ಪುಂಡಲೀಕದಾರುತಿಯಾ ಬೆಳಗೀರೆ2
ಶ್ರೀಶ ಪ್ರಾಣೇಶ ವಿಠಲದೂತ ಪರಾಕೂ |ಶ್ರೀಶನ ಗುಣಗಳ ತುತಿಪ ಪರಾಕೂ |ಆಶೇಶು ಹೇಮಂತ ಮೆರೆವ ಪರಾಕೂ |ದೇಶಿಕ ಶ್ರೇಷ್ಠ ನಿರ್ದುಷ್ಟ ಪರಾಕೆಂದು |ಸಾಸಿರ ಆರುತಿಯ ಬೆಳಗಿರೆ3
***