Showing posts with label ಕೇಶವ ಕೇಶವನೆಂದು ನುಡಿಯಲು ಈ ಸಂಸಾರದ ankita prasanna KESHAVA KESHAVANENDU NUDIYALU EE SAMSARADA. Show all posts
Showing posts with label ಕೇಶವ ಕೇಶವನೆಂದು ನುಡಿಯಲು ಈ ಸಂಸಾರದ ankita prasanna KESHAVA KESHAVANENDU NUDIYALU EE SAMSARADA. Show all posts

Wednesday, 30 December 2020

ಕೇಶವ ಕೇಶವನೆಂದು ನುಡಿಯಲು ಈ ಸಂಸಾರದ ankita prasanna KESHAVA KESHAVANENDU NUDIYALU EE SAMSARADA

 

Audio by Vidwan Sumukh Moudgalya

ಶ್ರೀ ವಿದ್ಯಾಪ್ರಸನ್ನತೀರ್ಥರ ರಚನೆ 


 ರಾಗಮಾಲಿಕೆ 

(ಕೀರವಾಣಿ,ಸಾರಂಗ,ರಂಜನಿ,ಹಂಸನಾದ)


 ಕೀರವಾಣಿ 

ಕೇಶವ ಕೇಶವನೆಂದು ನುಡಿಯಲು

ಈ ಸಂಸಾರದ ಕ್ಲೇಶ ತೊಲಗುವುದು llಪll


ಮಾಧವ ಮಾಧವನೆಂದು ನುಡಿಯಲು

ಮಾದರಿಯಲ್ಲಿದ ಮೋದವ ಪೊಂದುವಿ llಅ.ಪll


ಗೋವಿಂದ ಗೋವಿಂದನೆಂದು ನುಡಿಯಲು

ಎಂದಿಗೂ ತೋರದ ನಂದವ ಪೊಂದುವಿ

ವಾಮನ ವಾಮನನೆಂದು ಪೊಗಳಲು

ತಾಮಸವಿಲ್ಲದೆ ಕಾಮಿತ ಪೊಂದುವಿ ll1ll


 ಸಾರಂಗ 

ಶ್ರೀಧರ ಶ್ರೀಧರನೆಂದು ನುಡಿಯಲು

ಈ ಧರೆಯೊಳು ನಿನಗೆ ಖೇದವೆಲ್ಲಿಯದು

ಅಚ್ಚುತ ಅಚ್ಚುತನೆಂದು ಪೊಗಳಲು

ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ ll2ll


 ರಂಜನಿ 

ನರಹರಿ ನರಹರಿಯೆಂದು ನುಡಿಯಲು

ಪರತರ ಸುಖವನು ನಿರುತವು ಪೊಂದುವಿ

ಶ್ರೀ ಕೃಷ್ಣನೆಂದು ಪೊಗಳಲು

ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ ll3ll


 ಹಂಸನಾದ 

ರಾಘವ ರಾಘವನೆಂದು ಪೊಗಳಲು

ನೀಗುವೆ ಸುಲಭದಿ ಅಘಗಳೆಲ್ಲವನು

ಭಾರ್ಗವನೆನಲು ಪ್ರಸನ್ನ ನಾಗಿ ಹರಿ

ದುರ್ಗಮ ಮೋಕ್ಷಕೆ ಮಾರ್ಗವ ತೋರುವ ll4ll

********