Showing posts with label ಹರಿಯೇ ದೈವಶಿಖಾಮಣಿ ಹರಿಯೇ ಸದ್ಭಕ್ತ ಬಂಧು mahadevapuravasa. Show all posts
Showing posts with label ಹರಿಯೇ ದೈವಶಿಖಾಮಣಿ ಹರಿಯೇ ಸದ್ಭಕ್ತ ಬಂಧು mahadevapuravasa. Show all posts

Thursday, 5 August 2021

ಹರಿಯೇ ದೈವಶಿಖಾಮಣಿ ಹರಿಯೇ ಸದ್ಭಕ್ತ ಬಂಧು ankita mahadevapuravasa

   ..

ಕ್ಷೇತ್ರವರ್ಣನೆ

(1) ಮೇಲುಕೋಟೆ

ಹರಿಯೇ ದೈವಶಿಖಾಮಣಿ

ಹರಿಯೇ ಸದ್ಭಕ್ತ ಬಂಧು ಹರಿಯೇ ಪೂಜ್ಯಂ

ಹರಿಪೂಜೆಯೆ ಪಾಪಕ್ಷಯ

ಹರಿಪೂಜೆಯೆ ಪರಮಪುಣ್ಯದಾಲಯಮದರಿಂ ಕಂದ

ತಿರುನಾರಾಯಣಸ್ವಾಮಿಯೆ ನಿಮ್ಮಡಿಯೀಕ್ಷಿಸಿ

ಹೃದಯದೊಳರ್ಚಿಸುವೆ ಪ


ಪರಮಸುಗತಿಯನು ಬೇಡುವೆಸಂತತ-

ಮರೆಯದೆ ಪಾಲಿಸು ವರಗಳನು ಅ.ಪ


ತಿರುಮಂತ್ರದ್ವಯದರ್ಥವ ಬೋಧಿಸಿ

ಹರುಷದಿ ಪರಮನೆ ನೀನೆಂದು

ಮರಣ ಜನನದಾಯಾಸವ ತಪ್ಪಿಸಿ

ಉರುತರ ಸೌಖ್ಯಗಳನು ಕೊಡುವ 1

ಮನ್ನಿಸಿಭಕ್ತರಪೊರೆಯುವಧೀರನೆ

ಅನ್ಯರಕಾಣೆನುನಾನಿನ್ನು

ನಿನ್ನನೆ ನಂಬಿದೆ ನರಹರಿಮೂರ್ತಿಯೆ

ಇಂದೀ ಸಂಸೃತಿ ಜಾರಿಸುವ 2

ಲೋಕದ ವಾಸನೆ ಶಾಸ್ತ್ರದವಾಸನೆ-

ಸಾಕೈದೇಹದ ವಾಸನೆಯ

ಶ್ರೀ ಕಮಲೇಶನೆ ನಿನ್ನನು ಸ್ಮರಿಸುವ

ಈ ಕಡುವಾಸನೆ ಹೆಚ್ಚಿಸುತ 3

ಮಂಗಳ ಯದುಗಿರಿವಾಸ ಪರಮಗುರು

ರಂಗನೆ ನಿಜಕೃಪೆದೋರುತಲಿ

ಮಂಗಳಶಾಸನ ಗೈವುತ ಸಜ್ಜನ

ಸಂಗದೊಳೆನ್ನನು ಸೇರಿಸುವ 4

****