ರಾಗ : ನಾದನಾಮಕ್ರಿಯ ತಾಳ : ಆದಿ
ದಾಸನ ಮಾಡಿಕೊ ಎನ್ನ ಇಷ್ಟು
ಘಾಸಿ ಮಾಡುವರೇನೊ ಕರುಣಾಸಂಪನ್ನ ||ಪ||
ದುರುಳ ಬುದ್ಧಿಗಳೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕ್ಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||
ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||
ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸಿರಿ
ಪುರಂದರ ವಿಠಲ ಕರುಣದಿ ಕರೆದು ||೩||
***
dasana madiko enna || pa ||
svami sasira namada venkataramana || a.pa. ||
durubuddhigalanella bidiso ninna
karunakavacavenna haranakke todiso
charanaseve enage kodiso abaya
karapushpavenna siradalli mudiso || 1 ||
drudha bakuti ninnalli bedi
nanadigeraguvenayya anudina padi
kadegannelekenna nodi kodu
ninna dhyana mana suci madi || 2 ||
morehokkavara kava birudu
enna mareyade rakshane madayya karedu
duritarasigalella taridu siri
purandaravithala ennanu poredu || 3 ||
***