Showing posts with label ಈತನೀಗ ಭಾರತೀಶನು ತನ್ನ ಪ್ರೀತಿಸುವರ vijaya vittala. Show all posts
Showing posts with label ಈತನೀಗ ಭಾರತೀಶನು ತನ್ನ ಪ್ರೀತಿಸುವರ vijaya vittala. Show all posts

Wednesday, 16 October 2019

ಈತನೀಗ ಭಾರತೀಶನು ತನ್ನ ಪ್ರೀತಿಸುವರ ankita vijaya vittala

ವಿಜಯದಾಸ
ಈತನೀಗ ಭಾರತೀಶನು ತನ್ನ ಪ್ರೀತಿಸುವರ |
ಮನದ ಮಾತು ಸಲಿಸಿ ಮುಕುತಿ ಈವ ಪ

ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ |
ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ ||
ಮುರಿದು ಧರೆಗೆ ವರಿಸಿದಾತಾ ಅಪ
ಧುರದೊಳಕ್ಷನ ಹರಣವಳಿದು |
ಗುರುವರ್ಹತ್ತುಶಿರನ ಜರಿದು ||
ನಗರ ಉರುಪಿ ಮರಳಿ |
ಹರಿಯ ಚರಣಕ್ಕೆರಗಿದಾತಾ 1

ಕುರುನಿಕರ ಕರುಬಿ ಬೊ-|
ಬ್ಬಿರಿದು ನಿಂದುರವಣಿಸಿ ಎದುರಾ-||
ದರಿಗಳ ಶಿರ ತರಿದು ತಳೋ-|
ದರಿಯ ಹರುಷಬಡಿಸಿದಾತಾ2

ಕರಿಯ ತೆರದಿ ದುಷ್ಟ ಸಂಕರನು |
ತಿರುಗಲವನ ಮುರಿದು ಮತ್ತೆ ||
ಮರುತಮತದ ಬಿರುದನೆತ್ತಿ - |
ಪರನೆ ವಿಜಯವಿಠ್ಠಲನೆಂದಾ 3
***

pallavi

ItanIga bhAratIshanu tanna prItisuvara manadu mAtu salisi mukuti Iva

anupallavi

sharadhi gigidu hAri lankApuravara shOdisi hariya rANige kuruhanittu maragaLuruhi muridu dharege varisidAtA

caraNam 1

dhuradoLakSaNa haraNavaLidu guruvarhattu shirana jaridu
sarrene nagara urupi maraLi hariya caraNakkeragidAta

caraNam 2

kurini karava tarubi bobbiridu nindu ravaNisi edurAdarigaLa
shira taredu taLOdaiya haruSa baDisi dAtA

caraNam 3

kariya teradi duSTa sankaranu tirugalavana muridu matte
maruta manada birudanetti parane vijayaviThalanendA
***