ಇನ್ನೆಂಥಾ ಚೆಲುವ ಪಾದವೊ |ಪ|
ಎಂಥಾ ಪಾವನ ಪಾದ ಇಂತು ಜಗದಿ ಕೇಳು
ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ|
ಹಲವು ಕಾಲಗಳಿಂದ ಮಾರ್ಗದಿ
ಶಿಲೆ ಶಾಪ ಪಡೆದಿರಲು|
ಒಲಿದು ರಜದಿ ಪಾವನಗೈದು ಕರುಣದಿ
ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ||
ಬಲಿಯ ದಾನವ ಬೇಡಿ ತ್ರೈಲೋಕ್ಯವ
ನಳೆದು ಏಕೆಂಘ್ರಿಯಲಿ|
ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ
ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ||
ಚೆಂಡು ತರುವ ನೆವದಿ ಕಾಳಿಂಗನು-
ದ್ದಡ ಮಡುವ ಧುಮುಕಿ|
ಚಂಡ ಕಾಳಿಂಗನ ಮಂಡೆಯೊಳಗೆ ಪಾದ-
ಪುಂಡರೀಕವನಿಟ್ಟು ತಾಂಡವವಾಡಿದ||
ಸಂತತ ಸೌಖ್ಯವೆಂಬ ಕಾವೇರಿಯ
ಅಂತರಂಗದಿ ನೆಲೆಸಿ|
ಸಂತೋಷದಿಂದ ಅನಂತನ ಮೇಲೆ ನಿ-
ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ||
ಒಲಿದು ಗಯಾಸುರನ ಶಿರದೊಳಿಟ್ಟು
ಹಲವು ಭಕ್ತರ ಪೊರೆದ|
ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ
ತೊಲಗದೆ ಇರುತಿಪ್ಪ ಸುಲಭ ಹಯವದನನ||
***
pallavi
entha pAvana pAdavo krSNayya innentha celuva pAdavo
anupallavi
entha celuva pAda intu jagadi kELu panthadoLidda kurupatiya uruLisida
caraNam 1
baliya dAnava bEDi trailOkyava aLedu EkAngriyali beLedu bhEdisuvAga
naLina jANDava sOki celuva gangeya petta jalajAsanArcita
caraNam 2
halavu kAlagaLindali mArgadi shile shApa paDediralu olidu rajadi
pAvanagaidu karuNadinda abaleya mADi salahida shrIhariya
caraNam 3
ceNDu taruva nevadi kALinganuddaNDa maDuva dhumuki
caNDa kALingana maNDeyoLu pAda puNDarIkavaniTTu tANDavanADida
caraNam 4
santata saukhyavIva kAvEriya antarangadi nelasi santOSadinda
anantana mEle nishcinteyoLu lakumi bhUkAntera sEvipa
caraNam 5
olidu gayAsurana shiradoLu iTTu halavu bhaktara porede nelesi
uDupili enna hrudaya kamaladalli tolagade irutippa sulabha hayavadana
***