ಕಂಡೆ ಕಂಡೆ ಮುಚುಕುಂದವರದ ಮು-
ಕುಂದ ಮೂಡಲಗಿರಿ ಗೋವಿಂದನ ಪ
ಶರಧಿ ಬಿಟ್ಟು ಈ ಗಿರಿಯಲ್ಯಾಕೊ ನೀ
ತೆರೆದ ಕಣ್ಣು ನಾರುವಮೈಗೆ ಬಿಳಿಯ ಕರ್ಪುರ
ಪರಿಮಳದ ಸುವಾಸನೆಗೆ
ಜರಿದು ಬಂದೆ ನಿನ್ನ ಪರಿಯ ನಾ ಬಲ್ಲೆ 1
ಛಲನ ಮೇಲೆ ನಿನ್ನ ಛಲವು ಯಾಕೊ ನೀ
ಸುರರಸುರರ ಕೈಯಲಿ ಸಿಕ್ಕು
ಧರಿಸಿ ಭಾರ ತಿರುಗನುಪಕಾರ
ಗಿರಿರಾಜನು ನಿನ್ನ ಸರಿಯೆಂದೆನಿಸುವ 2
ಬಲ್ಲೆ ಬಲ್ಲೆ ಕೋರ್ಹಲ್ಲುಗಳಿಂದ
ಮೆಲ್ಲುತ ಬೇರನವಲ್ಯವನು
ಎಲ್ಲ ನೀಗಿ ದಧ್ಯಾನ್ಯ ನೈವೇದ್ಯ
ಚೆಲ್ವ ಧರಣಿಪತಿ ಬಲ್ಲಿದ ವರಾಹನ 3
ಕಂಬ ಒಡೆದು ಕರುಳ್ಹಾರವಲ್ಲದೆ
ಕಂಡು ಅಜನ ಕಂಠಾಭರಣ
ನೊಂದ ಮೈಗೆ ಪುನುಕಾಪು ಮಜ್ಜನ
ತಾಂಬೂಲ ಮಂಚ ಸುಪ್ಪತ್ತಿಗೆಶಯನ 4
ದಾನ ಬೇಡಿದ ನೆಲ ಭೂಮಿಯ ಬಿಟ್ಟುರ-
ಗಾದ್ರಿಯಲಿರುವುದು ಉಚಿತವಲ್ಲ
ಸಾಧಿಸಿ ಬಲಿಯ ಪಾತಾಳಕೆ ಮೆಟ್ಟಿದ
ಪಾದ ತೋರದಲಾಚ್ಛಾದನ ಮಾಡಿದಿ 5
ಪೊಡವಿದಾನ ನೆಲಬಿಡದೆ ಕೊಟ್ಟು
ಅಡವಿ ಗುಡ್ಡದಲ್ಲಾವಾಸ
ಕೊಡಲಿಪಿಡಿದು ತನ್ನ ಹಡೆದ ಮಾತೆಶಿರ
ಕಡಿದ ಕೈ ಕೆಳಗೆ ಮಾಡ್ಹಿಡಿದಸುರನ 6
ಹೆತ್ತಜನಕ ಮನೆಬಿಟ್ಟು ಹೊರಡಿಸೆ
ಉಟ್ಟ ನಾರ್ವಸÀ್ತ್ರ ಸಹಿತಾಗಿ
ಲಕ್ಷ್ಮಿ ಲಕ್ಷಿಟ್ಟು ಬಂದ್ವಕ್ಷ ಸ್ಥಳದಲ್ಲಿರೆ
ಅಷ್ಟಪದವಿಗಧಿಕಾರಿ ಎನಿಸಿದಿ 7
ಗೊಲ್ಲರೇಶ ಎಲ್ಲರಿಗುತ್ತಮನೆಂದು
ಬಲ್ಲಿದಮುನಿ ಪಾದದ್ವೊದೆಯೆ
ಕೊಲ್ಲಾಪುರ ಮನೆಮಾಡೆ ಮಹಾಲಕ್ಷುಮಿ
ನಿಲ್ಲದೆ ಬಂದ್ವಾಲ್ಮೀಕವ ಸೇರಿದೆ 8
ಸಾರಿ ಹೇಳಿ ನೀ ನಿಗಮವ ನಿಂದ್ಯಮಾಡಿ
ನಾರಿಯರ ವ್ರತವಳಿದು
ಮಾರಜನಕ ಅಭಿಮಾನ ಬಿಟ್ಟರೆ ಅ-
ಪಾರಮಹಿಮ ನಿನ್ನ ನೋಡಿ ನಗುವರೊ 9
ದೊರೆ ನಿನ್ನ ದರುಶನಕೆ ತ್ವರಿತದಿ ಜನರು
ಮೂವತ್ತು ಗಾವುದ ಮೂರ್ಹೆಜ್ಜೆಯ ಮಾಡಿ
ತುರಗನೇರ್ಹಾರಿಸಿ ಗಿರಿಯ ಬಿಟ್ಟೂ ್ಹೀದರೆ
ವರದ ವೆಂಕಟನ್ಹಿಂದೆ ತಿರುಗುವರ್ಯಾರೊ 10
ನಿನ್ನ ನಾಮವ ತಂದೆನ್ನ ಜಿಹ್ವಕೆ
ಚೆನ್ನವಾಗಿ ಬಂಧನ ಮಾಡೆ
ಘನ್ನ ಮಹಿಮ ಭೀಮೇಶಕೃಷ್ಣ ಬಂದು
ಕಣ್ಣಿಗೆ ಸುಳಿವ ಪ್ರಸನ್ನವೆಂಕಟನ 11
****