..
ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ
ಒದಗಿ ಬರುವ ಮೃತ್ಯುವ ಪರಿಹರಿಸುವ
ಪದುಮನಾಭನ ಪದಪದುಮಕ್ಕೆರಗುವ ಅ.ಪ
ಚಂಚಲ ಸಿರಿಗಾಗಿ ಲೋಕ ಪ್ರ-
ಪಂಚಕೆ ಬೆರಗಾಗಿ
ಸಂಚಿತ ಕರ್ಮವ ಕಳೆಯದೆ ಕಾರ್ಯವು
ಮಿಂಚಿದ ಬಳಿಕಾಯಾಸಕ್ಕಿಂತಲು1
ಚಿಂತೆಯೆಲ್ಲವ ಕಳೆದು ಮನದಿ ನಿ-
ಶ್ಚಿಂತೆಯಾಗಿ ನಲಿದು
ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ
ಸಂತೋಷ ಶರಧಿಯಳೋಲ್ಯಾಡುವುದು 2
ಶರಣ ಜನರ ಪೊರೆವ, ದ್ವಾರಕಾ-
ಪುರವರದಲಿ ತಾನಿರುತಿರುವಪರಮ ಪುರುಷ
ನಮ್ಮ ಸಿರಿಕೃಷ್ಣರಾಯನಮುರಳಿಧರನ
ಸೇವಿಸಿ ಸುಖಿಯಾಗುವ.3
***
pallavi
idu balu sukha kANe kELidakeNeyanu nA kANe?
anupallavi
odagi baruva mrutyuva pariharisuva padumanAbhana pada padumakkeraguva
caraNam 1
cancala sirigAgi lOka prapancake beragaagi
sancita karmava kaLeyade kAryavu mincida baLikAyAsakintalu
caraNam 2
cinteyellava kaLedu manadi nishcinteyAgi nalidu
antarangadi lakSmIkAntana tutisuta santOSa sharadhiyoLOlyADuvadu?
caraNam 3
sharaNa janara poreva dvArakApuravaradali tAnirutiruva
paramapuruSa namma siri kruSNarAyana muruLidharana sEvisi sukhiyAguva
***