Showing posts with label ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ indiresha modalakallu sheshadasa stutih. Show all posts
Showing posts with label ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ indiresha modalakallu sheshadasa stutih. Show all posts

Monday, 2 August 2021

ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ ankita indiresha modalakallu sheshadasa stutih

ಮೊದಲಕಲ್ಲು ಶೇಷದಾಸ ಸ್ತುತಿ

ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ ಪ

ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ ಅ.ಪ.

ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ವರ 1

ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು 2

ತಂದೆ ಶ್ರೀ ನರಸಿಂಹನ ಪದದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದಬಾಷ್ಪಗಳಿಂದ ಧೇನಿಪರು 3

****