Showing posts with label ಹರಿಯೇ ಸರ್ವಸಾರವೆಂದು ಸಾರುವರು rukmesha. Show all posts
Showing posts with label ಹರಿಯೇ ಸರ್ವಸಾರವೆಂದು ಸಾರುವರು rukmesha. Show all posts

Thursday, 5 August 2021

ಹರಿಯೇ ಸರ್ವಸಾರವೆಂದು ಸಾರುವರು ankit rukmesha

 ..

kruti by rukmangadaru

ಹರಿಯೇ ಸರ್ವಸಾರವೆಂದು ಸಾರುವರು |ತೆರೆದು ಹೇಳಿ ತತ್ತ್ವವನು ತಾರಿಸುವರು ಪ


ಮೊರೆ ಹೊಕ್ಕವರ ಮನದ ಮಲಕು ಬಿಡಿಸುವರು |ಹರಿದು ಹೋಗುವವಗೆ ಕರೆದು ಕಡೆಗ್ಹಾಕುವರು1

ಧರೆಯೊಳವರೇ ಸಾಧು ಪುರುಷರೆನಿಸುವರು |ಸಿರಿಗೆ ಸೆರಗೊಡ್ಡಿ ಸಿರಬಾಗಿ ನಡಿಯದವರು 2

ಬರಿಯ ತರ್ಕದಿಂದ ಖಂಡಿಸದವರು |ಸರಿಗೆ ಬಂದರೆ ಸುಮ್ಮನೆ ಸಹಿಸುವರು 3

ಕಾಯ ಕದ್ದು ಕರ್ಮಪಾಶ ಕಳೆದವರು |ರಾಯ ರಂಕರಿಗೆ ಸರಿ ತಿಳಿದವರು 4

ಮಾಯದ ಮೂಲವಾದ ಭೇದವಳಿದವರು |ಲಯದ ಮನೆಯ ಮೆಟ್ಟಿ ಭಯ ಮೀರಿದವರು 5

ಅರಿತು ಅರಿಯದವರಂತೆ ತೋರುತಿಹರು |ಮರೆತು ಮರವಿಗೆ ತಾವೆ ಮರವಾಗಿಹರು6

ಗುರು ರುಕ್ಮಭೂಷಣನಂತ ತೋರಿಸುವರು |ತ್ವರಿತದಿ ತಮ್ಮ ನೆಲೆಯ ಕೊಡದವರು 7

***