Showing posts with label ನೀ ಸಾಹೆಯಾಗು ಯಮಗನುಗಾಲ pranesha vittala. Show all posts
Showing posts with label ನೀ ಸಾಹೆಯಾಗು ಯಮಗನುಗಾಲ pranesha vittala. Show all posts

Wednesday, 13 November 2019

ನೀ ಸಾಹೆಯಾಗು ಯಮಗನುಗಾಲ ankita pranesha vittala

by ಪ್ರಾಣೇಶದಾಸರು
ನೀ ಸಾಹೆಯಾಗು ಯಮಗನುಗಾಲ |ಶೇಷಾದೇವರೆ ರೋಹಿಣಿ ಬಾಲಾ ಪ

ಮೂರುತಿಯಲ್ಲಿ ಪುಟ್ಟಿ | ನಾರಾಯಣನ್ನ ಕೂಡಿ ||ಚಾರುಬದರಿಯಲ್ಲಿ ತೋರುತಿಹನೆ 1

ದಶರಥನ ಮಡದಿ | ಬಸುರೀಲಿ ಜನಿಸೀದಿ ||ಕುಸುಮನಾಭನರ್ಚನೆ ಎಸಗಿದಿಯೋ 2

ಪ್ರದ್ಯುಮ್ನಪರಿಯಂಕ| ರುದ್ರಾನಲಂಕಾರ ||ಭದ್ರ ಪ್ರದಾಯಕ ಭಕ್ತ ಪೋಷಾ3

ನೀಲಾಂಬರವನುಟ್ಟ | ತಾಳಾಂಕಬಿನ್ನಪ||ಲಾಲೀಸೊ ನಿನ್ನವನೆಂದ ನಿಶಾ4

ಪ್ರಾಣೇಶ ವಿಠಲನ | ಧ್ಯಾನದೋಳಿರುವಂತೆ ||ನೀನೊಲಿವದು ದೂರು ನೋಡದಲೇ 5
*******