by gopalaryaru
ಭಜಿಸು ಭಜಿಸು ಮನುಜ ಸದಯ ಹೃದಯ ಗೋಪಾಲಾರ್ಯವರ್ಯನನಿಜದಿ ನಿಜದಿ ಕರಣವಿಜಯನ ಜನ ಸುಜನ ವಂದ್ಯನ ಪ
ಕಾಮ ತಾಮಸಗಳಲಿ ಬಳಲುತ್ತ ಸೀಮೆ ಸೀಮೆಗಳನುಸುತ್ತುವೀಮನೋರಥಗಳಲೇನು ಗುರುವಿನನೇಮ ಕೀರ್ತನೆಯನಿರಾಮಯಾಮಲಾರ್ಥ ನಿಷ್ಕಾಮ ರಾಮಣೀಯಕವನು ಪ್ರೇಮದಿಂದ ಪೊಗಳುತ 1
ಯೋಗ ರಾಗದಿಂದ ಮನವ ನಾಗಲಾಗಲಧಿಕ ಭಕ್ತಿಯೋಗ ವೇಗ ಜನಿತ ಸದನುರಾಗದಿಂದ ನಿಲ್ಲಿಸಿರಾಗ ರೋಗವೆಂಬ ತಮವ ನೀಗಿ ಸದ್ವಿರಾಗದಿಂದ ಆಗಮಾಗಮಾಂತ ವಚನದಾಗು ಪೋಗನರಿತು ನೀ 2
ಕಾಲ ಕಾಲದಲ್ಲಿ ಬಾಲಲೀಲೆುಂದ ನಡೆದು ನುಡಿದುಶೀಲ ಲೋಲನಾಗಿ ಲೋಕ ಜಾಲ ಮೂಲವಾಮೇಲೆ ಮೇಲೆ ತಿಳಿದು ಬೆಳೆದು ನಲಿದು ಭಕ್ತಪಾಲ ಗೋಪಾಲಯತಿ ಕೃಪಾಲ ಸದ್ವಿಶಾಲಸುಖವ ತಳೆದು ನೀ 3
***