Showing posts with label ಪರಾನ್ನವೇತಕೆ ಬಂತಯ್ಯ ಎನಗೆಇಂದು purandara vittala. Show all posts
Showing posts with label ಪರಾನ್ನವೇತಕೆ ಬಂತಯ್ಯ ಎನಗೆಇಂದು purandara vittala. Show all posts

Friday, 6 December 2019

ಪರಾನ್ನವೇತಕೆ ಬಂತಯ್ಯ ಎನಗೆಇಂದು purandara vittala

ಪುರಂದರದಾಸರು
ಪರಾನ್ನವೇತಕೆ ಬಂತಯ್ಯ ಎನಗೆಇಂದು |ಪರಾನ್ನವೇತಕೆ ಬಂತಯ್ಯ ? ಪ.
ಪರಾ
ನ್ನವೇತಕೆ ಬಂತು ಪರಮೇಷ್ಟಿಜನಕನ |ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪಸ್ನಾನ ಮಾಡಿಕೊಂಡು - ಕುಳಿತು ಬಹು |ಮೌನದಿಂದಿರಲೀಸದು ||ಶ್ರೀನಿವಾಸನ ಧ್ಯಾನಮಾಡದೆ ಮವಿದು |ತಾನೆ ಓಡುವದು ಶ್ವಾನನೋಪಾದಿಯಲಿ 1

ಜಪವ ಮಾಡುವ ಕಾಲದಿ - ಕರೆಯ ಬರೆ |ವಿಪರೀತವಾಗುವುದು ||ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |ಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2

ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |ಸ್ವಸ್ಥದಿ ಕುಳಿತುಕೊಂಡು ||ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |ಶಸ್ತವಾಯಿತು ಎಂದು ಮುಸ್ತಕ ತಿರುವುವ 3

ಯಜಮಾನನು ಮಾಡದ - ಪಾಪಂಗಳ |ವ್ರಜವು ಅನ್ನದೊಳಿರಲು ||ದ್ವಿಜರು ಭುಂಜಿಸಲಾಗಿಅವರ ಉದರದೊಳು ||ನಿಜವಾಗಿ ಸೇರುವುದು ಸುಜನರು ಲಾಲಿಸಿ 4

ಮಾಡಿದ ಮಹಾಪುಣ್ಯವು - ಓದನಕಾಗಿ - |ಕಾಡಿಗೊಪ್ಪಿಸಿ ಕೊಡುತ |ರೂಢಿಗಧಿಕನಾದ ಪುರಂದರವಿಠಲನ |ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 5
********