..
ಕೋಲೆಂದು ಪಾಡಿರೆ ಕೋಮಲೆಯರೆಲ್ಲ ಅಮ್ಮಯ್ಯಬಾಲೆಯರು ಅರಿಷಿಣ ಕುಂಕುಮ ಹಚ್ಚಿಹೊಯಿದಾರಮ್ಮಯ್ಯ ಕೋಲ ಹೊಯಿದಾರಮ್ಮಯ್ಯ ಪ.
ಹಿಂಡು ನಾರಿಯರೆಲ್ಲ ಕೂಡಿ ದುಂಡು ಗಟ್ಟುತ ಕೊಂಡಾಡಿ ಕೃಷ್ಣನ ಕೋ¯ ಹೊಯಿದಾರಮ್ಮಯ್ಯ 1
ಹಸ್ತ ಕಡಗ ಹರಡಿ ದೋರೆ ಹವಳ ಕಂಕಣಹಸ್ತಿಗಮನೆಯರು ಎತ್ತಿ ಕೋಲ ಹೊಯಿದಾರಮ್ಮಯ್ಯ 2
ಮುತ್ತಿನ ವಾಲೆ ಮೂಗುತಿ ಮುದ್ದು ಸುರಿಯುತ್ತಜತ್ತಾಗಿ ಜಾಣೆಯರು ಕೋಲ ಹೊಯಿದಾರಮ್ಮಯ್ಯ 3
ಹೆರಳು ಬಂಗಾರ ಕ್ಯಾದಿಗೆ ಹೆಳಲು ಅಲೆಯುತ ನಳಿನ ಮುಖಿಯರಿಟ್ಟ ಕೋಲ ಹೊಯಿದಾರಮ್ಮಯ್ಯ 4
ಮಲ್ಲಿಗೆ ಸಂಪಿಗೆ ಮುಡಿದ ನಲ್ಲೆಯರೆಲ್ಲರುನಮ್ಮ ಫುಲ್ಲನಾಭನ ಪಾಡಿ ಕೋಲ ಹೊಯಿದಾರಮ್ಮಯ್ಯ5
ಚವರಿ ರಾಗಟೆ ಚಲ್ವಗೊಂಡ್ಯ ಛಂದಾಗಿ ಒಪ್ಪುತಚದುರೆಯರು ಛಂದಾಗಿ ಕೋಲ ಹೊಯಿದಾರಮ್ಮಯ್ಯ 6
ಥೋರ ಮುತ್ತಿನಹಾರ ಪದಕ ಭಾರ ಧರಿಸುತ ರಘುವೀರನ ಕೊಂಡಾಡಿ ಕೋಲ ಹೊಯಿದಾರಮ್ಮಯ್ಯ 7
ನಡುವಿಗೆ ಒಡ್ಯಾಣವಿಟ್ಟು ನಾರಿಯರೆಲ್ಲರು ತಮ್ಮ ಬಡನಡಬಳುಕುತ ಕೋಲ ಹೊಯಿದಾರಮ್ಮಯ್ಯ8
ಉಟ್ಟ ಪೀತಾಂಬರ ಕಾಲಿಗಿಟ್ಟ ಗೆಜ್ಜೆಯುನಮ್ಮ ಧಿಟ್ಟರಮಿಅರಸನೆಂದು ಕೋಲ ಹೊಯಿದಾರಮ್ಮಯ್ಯ9
****