Showing posts with label ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ purandara vittala PUNDAREEKAVARADA PANDHARIRAAYANA KELAVVA KELE. Show all posts
Showing posts with label ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ purandara vittala PUNDAREEKAVARADA PANDHARIRAAYANA KELAVVA KELE. Show all posts

Monday, 6 December 2021

ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ purandara vittala PUNDAREEKAVARADA PANDHARIRAAYANA KELAVVA KELE




ಪುಂಡರೀಕವರದ ಪಂಢರಿರಾಯನ 
ಕೇಳವ್ವ ಕೇಳೆ ||ಪ||

ಗೋಕುಲದೊಳಗೆ ತಾನಿಪ್ಪ 
ಮೂರು ಲೋಕಕೆ ತಾನಪ್ಪ 
ಕೊಳಲ ಧ್ವನಿಯ ಮಾಡುತಲಿಪ್ಪ 
ನಮ್ಮ ತುರುಗಳ ಕಾಯುತಲಿಪ್ಪ ||೧||

ವೃಂದಾವನದೊಳು ನಿಂದ 
ನಂದನ ಕಂದ ಗೋವಿಂದ 
ಕೊಳಲ ಧ್ವನಿ ಬಹು ಚಂದ 
ಮೂಜಗವ ಪಾಲಿಪ ಮುಕುಂದ ||೨||

ಸುರತರುವಿನ ನೆರಳಲ್ಲಿ 
ಇವನ ಹೆಗಲಿನ ಮೇಲೆ ಕೊಡಲಿ
ನೆರೆದಿಹ ಗೋಪಿಯರಲ್ಲಿ 
ಗೋಪಾಲರಾಡುತ ಲೀಲೆಗಳಲ್ಲಿ ||೩||

ಕರ್ಪೂರ ವೀಳ್ಯವ ಮೆಲುವ 
ನಮ್ಮ ಕಸ್ತೂರಿ ತಿಲಕ ಉಂಗುರವ 
ಮುತ್ತಿನ ಓಲೆ ವರ ಚೆಲುವ 
ವಿಸ್ತರದಿ ಹದಿನಾಲ್ಕು ಲೋಕ ಪೊರೆವ ||೪||

ಹಿಮಕರಚರಣದ ಕರನ 
ಮೂಜಗ ಪಾಲಿಪ ಕರುಣ 
ಅಮರರಿಗೆ ಒಲಿದವನ ನಮ್ಮ 
ಪುರಂದರ ವಿಠಲರಾಯನ ||೫||
***

Pundarikavarada pandharirayana 
kelavva kele ||pa||

Gokuladolage tanippa 
muru lokake tanappa 
kolala dhvaniya madutalippa 
namma turugala kayutalippa ||1||

Vrundavanadolu ninda 
nandana kanda govinda 
kolala dhvani bahu chanda 
mujagava palipa mukunda ||2||

Surataruvina neralalli 
ivana hegalina mele kodali
nerediha gopiyaralli 
gopalaraduta lilegalalli ||3||

Karpura vilyava meluva 
namma kasturi tilaka ungurava 
muttina ole vara cheluva 
vistaradi hadinalku loka poreva ||4||

Himakaracharanada karana 
mujaga palipa karuna 
amararige olidavana namma 
purandara vittalarayana ||5||
***

pallavi

puNDarIka varada paNDhari rAyana kELvva kELe

caraNam 1

gOkuladoLage tAnippa mUru lOkake tAnappa
koLala dhvaniya mADutalippa namma turugaLa kAyutalippa

caraNam 2

vrndAvanadoLu ninda nandana kanda gOvinda
koLala dhvani bahu canda mU-jagava pAlipa mukunda

caraNam 3

sura taruvina neraLalli ivana hegalina mEle koDali
nerediha gOpiyaralli gOpAlarADuta lIlegaLalli

caraNam 4

karpUra vILyava meluva namma kastUri tilaka ungurava
muttina Ole vara celuva vistaradi hadinAlgu lOka poreva

caraNam 5

himakara caraNada karana mU-jaga pAlipa karuNa
amaraige olidavana namma purandara viTTala rAyana
***

ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ || ಪ||

ಗೋಕುಲದೊಳಗೆ ತಾನಿಪ್ಪ, ಮೂರು ಲೋಕಕೆ ತಾನಪ್ಪ
ಕೊಳಲ ಧ್ವನಿಯ ಮಾಡುತಲಿಪ್ಪ, ನಮ್ಮ ತುರುಗಳ ಕಾಯುತಲಿಪ್ಪ ||

ವೃಂದಾವನದೊಳು ನಿಂದ, ನಂದನಕಂದ ಗೋವಿಂದ
ಕೊಳಲ ಧ್ವನಿ ಬಹು ಚಂದ, ಮೂಜಗವ ಪಾಲಿಪ ಮುಕುಂದ ||

ಸುರತರುವಿನ ನೆರಳಲ್ಲಿ, ಇವನ ಹೆಗಲಿನ ಮೇಲೆ ಕೊಡಲಿ
ನೆರೆದಿಹ ಗೋಪಿಯರಲ್ಲಿ, ಗೋಪಾಲರಾಡುತ ಲೀಲೆಗಳಲ್ಲಿ ||

ಕರ್ಪೂರ(ದ) ವೀಳ್ಯವ ಮೆಲುವ, ನಮ್ಮ ಕಸ್ತೂರಿತಿಲಕ ಉಂಗುರವ
ಮುತ್ತಿನ ಓಲೆ ವರಚೆಲುವ, ವಿಸ್ತರದಿ ಹದಿನಾಲ್ಕು ಲೋಕ ಪೊರೆವ ||

ಹಿಮಕರಚರಣದ ಕರನ, ಮೂಜಗ ಪಾಲಿಪ ಕರುಣ
ಅಮರರಿಗೆ ಒಲಿದವನ, ನಮ್ಮ ಪುರಂದರವಿಠಲರಾಯನ ||
***

ರಾಗ ಶ್ರೀ ಆದಿತಾಳ (raga tala may differ in audio)