ankita ವಿಠಲೇಶ
ಗುರುರಾಘವೇಂದ್ರ ನಮೊ
ಗುರುರಾಘವೇಂದ್ರ ನಮೋ ಗುರುರಾಘವೇಂದ್ರ ನಮೋ ಪ
ಗುರುರಾಘವೇಂದ್ರ ವರಯೋಗಿ
ಗುರುರಾಘವೇಂದ್ರ ವರಯೋಗಿ ಸುಗುಣವೈರಾಗಿ ಭಕುತ ಹಿತಕಾಗಿ
ಅವತರಿಸಿ ಬಂದೆ ಯತಿಚಂದ್ರಾ ಗುರುರಾಘವೇಂದ್ರ ನಮೋ 1
ಪಿತನಿಂದ ಬಹಳ ವ್ಯಥೆಯಾಗಿ
ಪಿತನಿಂದ ಬಹಳ ವ್ಯಥೆಯಾಗಿ ಹರಿಯನೆರೆಕೂಗಿ ಕಂಬಗುಡುಗಾಡಿ
ನರಹರಿಯ ತಂದ ಹಸುಳೇಂದ್ರಾ ಗುರುರಾಘವೇಂದ್ರ ನಮೋ 2
ಕುಹಯೋಗವಕಳೆದ ದಿವಿಯೋಗಿ
ಕುಹಯೋಗವಕಳೆದ ದಿವಿಯೋಗಿ ಧರೆಗೆ ಧೊರೆಯಾಗಿ ಧರ್ಮಪ್ರಭುವಾಗಿ
ಕರಿನಾಡನಾಳ್ದ ರಾಜೇಂದ್ರಾ ಗುರುರಾಘವೇಂದ್ರ ನಮೋ 3
ಸುರಧೇನು ಕಲ್ಪತರುವಂತೆ
ಸುರಧೇನು ಕಲ್ಪತರುವಂತೆ ಭಕುತಮನದಂತೆ ಸೌಖ್ಯದೊರೆವಂತೆ
ಸತಿಕಾಯ್ವ ಕೀರ್ತಿಕಳೆಚಂದ್ರಾ ಗುರುರಾಘವೇಂದ್ರ ನಮೋ 4
ಗುರುಸಾರ್ವಭೌಮ ಜಗಜ್ಯೋತಿ
ಗುರುಸಾರ್ವಭೌಮ ಜಗಜ್ಯೋತಿ ಮಧ್ವಮತಕೀರ್ತಿ ಕಾವ್ಯಕಲಾಮೂರ್ತಿ
ಹರಿಕೃಪಾಛತ್ರ ಮಹಿಮೇಂದ್ರಾ ಗುರುರಾಘವೇಂದ್ರ ನಮೋ 5
ಸುಜಯೀಂದ್ರಸೇವ್ಯ ಗುರುರಾಜ
ಸುಜಯೀಂದ್ರಸೇವ್ಯ ಗುರುರಾಜ ನಿತ್ಯನವತೇಜಸಂಭ್ರಮವಿ-
ರಾಜಾ ಹೊಳೆಹೊಳೆವ ಚಿನ್ಮಯಮಣೀಂದ್ರ ಗುರುರಾಘವೇಂದ್ರ ನಮೋ 6
ಶಿರಬಾಗಿ ಮಣಿವೆ ಗುರುದೇವಾ
ಶಿರಬಾಗಿ ಮಣಿವೆ ಗುರುದೇವಾ ಕೊಡುಗೆಮತಿಭಾವ(?)ದಿವ್ಯತವಸೇವಾ
ವಿಠಲೇಶಪ್ರೀತ ಪ್ರಭುಚಂದ್ರ ಗುರುರಾಘವೇಂದ್ರ ನಮೋ 7
****