Thursday, 2 December 2021

ಗುರುರಾಘವೇಂದ್ರ ನಮೊ ಗುರುರಾಘವೇಂದ್ರ ನಮೊ ankita vittalesha GURU RAGHAVENDRA NAMO GURU RAGHAVENDRA NAMO





ankita ವಿಠಲೇಶ      

ಗುರುರಾಘವೇಂದ್ರ ನಮೊ

ಗುರುರಾಘವೇಂದ್ರ ನಮೋ ಗುರುರಾಘವೇಂದ್ರ ನಮೋ  ಪ


ಗುರುರಾಘವೇಂದ್ರ ವರಯೋಗಿ

ಗುರುರಾಘವೇಂದ್ರ ವರಯೋಗಿ ಸುಗುಣವೈರಾಗಿ ಭಕುತ ಹಿತಕಾಗಿ

ಅವತರಿಸಿ ಬಂದೆ ಯತಿಚಂದ್ರಾ ಗುರುರಾಘವೇಂದ್ರ ನಮೋ  1

ಪಿತನಿಂದ ಬಹಳ ವ್ಯಥೆಯಾಗಿ

ಪಿತನಿಂದ ಬಹಳ ವ್ಯಥೆಯಾಗಿ ಹರಿಯನೆರೆಕೂಗಿ ಕಂಬಗುಡುಗಾಡಿ

ನರಹರಿಯ ತಂದ ಹಸುಳೇಂದ್ರಾ ಗುರುರಾಘವೇಂದ್ರ ನಮೋ  2

ಕುಹಯೋಗವಕಳೆದ ದಿವಿಯೋಗಿ

ಕುಹಯೋಗವಕಳೆದ ದಿವಿಯೋಗಿ ಧರೆಗೆ ಧೊರೆಯಾಗಿ ಧರ್ಮಪ್ರಭುವಾಗಿ

ಕರಿನಾಡನಾಳ್ದ ರಾಜೇಂದ್ರಾ ಗುರುರಾಘವೇಂದ್ರ ನಮೋ  3

ಸುರಧೇನು ಕಲ್ಪತರುವಂತೆ

ಸುರಧೇನು ಕಲ್ಪತರುವಂತೆ ಭಕುತಮನದಂತೆ ಸೌಖ್ಯದೊರೆವಂತೆ

ಸತಿಕಾಯ್ವ ಕೀರ್ತಿಕಳೆಚಂದ್ರಾ ಗುರುರಾಘವೇಂದ್ರ ನಮೋ  4

ಗುರುಸಾರ್ವಭೌಮ ಜಗಜ್ಯೋತಿ 

ಗುರುಸಾರ್ವಭೌಮ ಜಗಜ್ಯೋತಿ ಮಧ್ವಮತಕೀರ್ತಿ ಕಾವ್ಯಕಲಾಮೂರ್ತಿ

ಹರಿಕೃಪಾಛತ್ರ ಮಹಿಮೇಂದ್ರಾ ಗುರುರಾಘವೇಂದ್ರ ನಮೋ  5

ಸುಜಯೀಂದ್ರಸೇವ್ಯ ಗುರುರಾಜ

ಸುಜಯೀಂದ್ರಸೇವ್ಯ ಗುರುರಾಜ ನಿತ್ಯನವತೇಜಸಂಭ್ರಮವಿ-

ರಾಜಾ ಹೊಳೆಹೊಳೆವ ಚಿನ್ಮಯಮಣೀಂದ್ರ ಗುರುರಾಘವೇಂದ್ರ ನಮೋ 6

ಶಿರಬಾಗಿ ಮಣಿವೆ ಗುರುದೇವಾ

ಶಿರಬಾಗಿ ಮಣಿವೆ ಗುರುದೇವಾ ಕೊಡುಗೆಮತಿಭಾವ(?)ದಿವ್ಯತವಸೇವಾ

ವಿಠಲೇಶಪ್ರೀತ ಪ್ರಭುಚಂದ್ರ ಗುರುರಾಘವೇಂದ್ರ ನಮೋ  7

****


No comments:

Post a Comment