Showing posts with label ಹರಿಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ purandara vittala. Show all posts
Showing posts with label ಹರಿಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ purandara vittala. Show all posts

Friday, 6 December 2019

ಹರಿಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ purandara vittala

ರಾಗ ಯದುಕುಲಕಾಂಭೋಜಿ. ಝಂಪೆ ತಾಳ

ಹರಿಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ ||ಪ||
ಅವರು ನರರೆಂದು ಬಗೆವವರೆ ನರಕವಾಸಿಗಳು ||ಅ.ಪ||

ಸದಮಲನ ನೆನೆಸುವ ಹೃದಯ ಕಾಶೀಪುರವು

ಮಧುವೈರಿ ನೆನೆವೆ ಮನ ಮಣಿಕರ್ಣಿಕೆ
ಪದುಮನಾಭನ ಪಾಡ್ವ ವದನವೇ ವೈಕುಂಠ
ಸದಮಲನ ಬಣ್ಣಿಸುವ ಜಿಹ್ವೆ ಶ್ರೀಮುಷ್ಟ

ನರಹರಿಯ ನಿರೀಕ್ಷಿಸುವ ನಯನ ದ್ವಾರಾವತಿಯು

ಸಿರಿಧರಗೆ ಶರಣೆಂಬ ಶಿರವೆ ಬದರಿ
ಮುರಹರನ ಕಥೆಯ ಕೇಳುವೆ ಕಿವಿಯ ಕೇದಾರ
ಹರಿಯ ನಿರ್ಮಾಲ್ಯ ಘ್ರಾಣಿಯ ಮೂಗು ಮಧುರೆ

ಲಕ್ಷ ಪ್ರದಕ್ಷಿಣೆ ಮಾಳ್ಪ ಚರಣ ಮಾಯಾವತಿಯು

ಲಕ್ಷ್ಮೀಪತಿಯ ಪೂಜಿಸುವ ಕರವೆ ಕಂಚಿ
ಶಿಕ್ಷಿಸುವುದು ಸುಕೃತ ದುಷ್ಕೃತ ಆಲಿಸಿ ಕೇಳೊ
ಪಕ್ಷಿವಾಹನ ಪುರಂದರವಿಠಲನು ಕೊಡುವ ಮುಕುತಿ
***

Hari bhakuti ullavara sharirava kuruksetra

Avaru nararendu bagevavare narakavasigalu

Sadamalana nenesuva hrdaya kashi puravu madhuvairi neneve mana manikarnike
Padumanabhana padva vadanave vaikuntha sadamalana bannisuva jihve shrimusna||1||

Narahariyaniksisuva nayana dvaravatiyu siridharake sharanemba shirave badari
Muraharana katheya keluva kiviya kedara hariya nirmalya ghraniya mugu madhure||2||

Laksa pradaksine malpa charana mayavatiyu laksmipatiya pujisuva karave kanci
Shiksisuvudu sukrta duskrta Alisi kelo paksivahana purandara vittalanu koduva  Mukuti||3||
***

pallavi

hari bhakuti uLLavara sharIrava kurukSEtra

anupallavi

avaru nararendu bagevavare narakavAsigaLu

caraNam 1

sadamalana nenesuva hrdaya kAshI puravu madhuvairi neneve mana maNikarNike
padumanAbhana pADva vadanavE vaikuNTha sadamalana baNNIsuva jihve shrImuSNa

caraNam 2

narahariyanIkSisuva nayana dvArAvatiyu siridharake sharaNemba shirave badari
muraharana katheya kELuva kiviya kEdAra hariya nirmAlya ghrANiya mUgu madhure

caraNam 3

lakSa pradakSiNe mALpa caraNa mAyAvatiyu lakSmIpatiya pUjisuva karave kanci
shikSisuvudu sukrta duSkrta Alisi kELo pakSivAhana purandara viTTalanu koDuva mukuti
***

ಪುರಂದರದಾಸರು
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.

ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1

ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2

ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
***