Showing posts with label ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ vijaya vittala. Show all posts
Showing posts with label ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ vijaya vittala. Show all posts

Thursday, 17 October 2019

ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ankita vijaya vittala

ವಿಜಯದಾಸ
ಬಿನ್ನಪವ ಕೇಳು ಜೀಯಾ
ಬನ್ನಬಡಿಸುವ ಮಾಯಾ
ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ
ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು
ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ
ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ
ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1

ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ
ಮಂದಿರದಲ್ಲಿ ಜನಿಸಿ ಎಂದು ನುಡಿದಡೆ
ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ
ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2

ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ
ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ
ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ
ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3

ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ
ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ
ನಿರಯ ದುರಾತ್ಮಗಿಲ್ಲ
ಕರವ ಮುಗಿದು ಒಂದು ವರ ಬೇಡುವೆ 4

ಭಾಗವತರ ಸಹವಾಸ ಭಾಗವತರ ಕಥಾಗುಣ
ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ
ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ
ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5

ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ
ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ
ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ
ನೀನೊಲಿದು ಎನ್ನ ಮನಕೆ ಆನಂದ ತೋರೋ 6

ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ
ರಜನಿಚರ ವಿನಾಶಾ ಸುಜನಮಾನಸಹಂಸ
ರಜದೂರ ಮಂದಹಾಸಾ
ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
********