Showing posts with label ಯೋಗಿವರ ವ್ಯಾಸರಾಯರೆಂಬ ವಿಚಿತ್ರ vijayeendra vyasaraja stutih. Show all posts
Showing posts with label ಯೋಗಿವರ ವ್ಯಾಸರಾಯರೆಂಬ ವಿಚಿತ್ರ vijayeendra vyasaraja stutih. Show all posts

Thursday, 1 July 2021

ಯೋಗಿವರ ವ್ಯಾಸರಾಯರೆಂಬ ವಿಚಿತ್ರ ankita vijayeendra vyasaraja stutih

 "  ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಸ್ತುತಿ "

ರಾಗ : ಆನಂದಭೈರವಿ    ತಾಳ : ತ್ರಿಪುಟ

ಯೋಗಿವರ ವ್ಯಾಸರಾಯರೆಂಬ ವಿಚಿತ್ರ ।
ಮೇಘ ವಿಷ್ಣು ಪದವ ತೋರಿಸುತ್ತ ಬಂತಿದಿಕೊ ।। ಪಲ್ಲವಿ ।।

ವಾಯುಮತವೆಂಬ ತಾರಾ ಮಂಡಲವ ಮುಸುಕುತ್ತ ।
ವಾಯುಗತಿಯಂತೆ ಗಮಿಸುತ್ತಲಿ ।
ಹೇಯ ಕಾಮಾದಿಗಳೆಂಬ ರಜವ ನಡಿಗಿಸುತ ।
ನಾಯಕನುಪೇಂದ್ರನ ಆಜ್ಞೆಯ ಪಡೆದು ।। ಚರಣ ।।

ಅಂಗಜನೈಯ್ಯನೆ ಪರನೆಂದು ಘುಡಿ ಘುಡಿಸುತ್ತ ।
ಕಂಗಳನೆಂಬ ಮಿಂಚನೆ ನೆರೆಹಿ ಲೋಕದಿ ।
ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ।
ಭಂಗಿಸಿ ಸುರೋತ್ತಮ ಪಥವ ತೋರಿಸುತ ।। ಚರಣ ।।

ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ ।
ಬೇರು ಬಿಡೆ ಹರಿಕಥೆಯೆಂಬ ಮಳೆಗರಿದು ।
ನೆರೆ ಶಿಷ್ಯಮನವೆಂಬ ಕೆರೆತುಂಬಿ ಕರಗಳೆಂಬ ।
ಭರ ಕೋಡಿ ವಾರಿಸುತ್ತ ವಿಜಯೀ೦ದ್ರನ ಗುರು ।। ಚರಣ ।।
***