Showing posts with label ಬಾರೋ ನಮ್ಮ ಮನೆಗೆ ಬೇಗನೆ kamalanabha vittala. Show all posts
Showing posts with label ಬಾರೋ ನಮ್ಮ ಮನೆಗೆ ಬೇಗನೆ kamalanabha vittala. Show all posts

Friday, 27 December 2019

ಬಾರೋ ನಮ್ಮ ಮನೆಗೆ ಬೇಗನೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪ

ಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪ

ಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1

ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2

ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3

ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4

ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
*******