..
kruti by ವೀರನಾರಾಯಣ Veeranarayana
ಈಸಲು ಬಿಡು ನನ್ನ ಹರಿ ಘನ್ನ ಪ
ಮೀಸಲು ಭಕುತಿಯ ರಸಜಲ ನಿಧಿಯಲಿ ಅ.ಪ.
ಏನು ತಿಳಿಯದವನಾಗಿ ನೀಗುಟ್ವುಜ್ಞಾನದ ಸಿಂಗಡಿ ಸಂಗಡ ಕೊಟ್ಟುಧ್ಯಾನದ ಪಾಶದ ಬಿಗಿಲಿಯಲಿ ಕಟ್ಟುಶ್ರೀನಿವಾಸನೇ ನೀ ದಯವಿಟ್ಟು 1
ಭವಸಾಗರವನು ದಾಟಿಸಬಲ್ಲನಾವಿಕ ನೀನಿಲ್ಲದೆ ಯಾರಿಲ್ಲಹವಣಿಸಿ ನಿನ್ನನೆ ನಂಬಿಹೆನಲ್ಲತವಕದಿ ಮನ್ನಿಸಿ ದೀನನ ಸೊಲ್ಲ 2
ಬಿನ್ನಪ ನನ್ನನು ದಯದಿಂದಾಲಿಸುಸನ್ನುತ ಗದುಗಿನ ವೀರನಾರಾಯಣಎನ್ನೊಳು ನೀ ದಯಪಾಲಿಸು 3
***