ಮಂಗಲಂ ಜಯ ಮಂಗಲಂ
ಮುಕುಟಕೆ ಮಂಗಲ ಮತ್ಸ್ಯಾವತಾರಗೆ
ಮುಖಕೆ ಮಂಗಲ ಮುದ್ದು ಕೂರ್ಮನಿಗೆ
ಸುಕಂಠಕೆ ಮಂಗಲ ಸೂಕರ ರೂಪಗೆ
ನಖಕೆ ಮಂಗಲ ನರಸಿಂಹಗೆ || ೧ ||
ವಕ್ಷಕೆ ಮಂಗಲ ವಟು ವಾಮನಗೆ
ಪಕ್ಷಕೆ ಮಂಗಲ ಪರಶುರಾಮನಿಗೆ
ಕಕ್ಷಕೆ ಮಂಗಲ ಕಾಕುಸ್ಥ ರಾಮಗೆ
ಕುಕ್ಷಿಗೆ ಮಂಗಲ ಶ್ರೀಕೃಷ್ಣಗೆ || ೨ ||
ಊರುಗಳಿಗೆ ಮಂಗಲ ಉತ್ತಮ ಬುದ್ಧಗೆ
ಚರಣಕೆ ಮಂಗಲ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯ ಮಂಗಲ || ೩ ||
***
maMgalaM jaya maMgalaM
mukuTake maMgala matsyAvatArage
muKake maMgala muddu kUrmanige
sukaMThake maMgala sUkara roopage
naKake maMgala narasiMhage || 1 ||
vakShake maMgala vaTu vAmanage
pakShake maMgala paraSurAmanige
kakShake maMgala kAkustha rAmage
kukShige maMgala SreekRuShNage || 2 ||
UrugaLige maMgala uttama buddhage
caraNake maMgala celuva kalkige
paripari roopage paramAnaMdage
puraMdaraviThalage jaya maMgala || 3 ||
***
ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||
ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ ||೧||
ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ ||೨||
ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ ||೩||
***