Friday, 6 December 2019

ಜಯ ಮಂಗಳಂ ನಿತ್ಯ ಶುಭ ಮಂಗಳಂ ಮುಕುಟಕ್ಕೆ purandara vittala dashavatara


ಮಂಗಲಂ ಜಯ ಮಂಗಲಂ

ಮುಕುಟಕೆ ಮಂಗಲ ಮತ್ಸ್ಯಾವತಾರಗೆ

ಮುಖಕೆ ಮಂಗಲ ಮುದ್ದು ಕೂರ್ಮನಿಗೆ

ಸುಕಂಠಕೆ ಮಂಗಲ ಸೂಕರ ರೂಪಗೆ

ನಖಕೆ ಮಂಗಲ ನರಸಿಂಹಗೆ || ೧ ||

ವಕ್ಷಕೆ ಮಂಗಲ ವಟು ವಾಮನಗೆ

ಪಕ್ಷಕೆ ಮಂಗಲ ಪರಶುರಾಮನಿಗೆ

ಕಕ್ಷಕೆ ಮಂಗಲ ಕಾಕುಸ್ಥ ರಾಮಗೆ

ಕುಕ್ಷಿಗೆ ಮಂಗಲ ಶ್ರೀಕೃಷ್ಣಗೆ || ೨ ||

ಊರುಗಳಿಗೆ ಮಂಗಲ ಉತ್ತಮ ಬುದ್ಧಗೆ

ಚರಣಕೆ ಮಂಗಲ ಚೆಲುವ ಕಲ್ಕಿಗೆ

ಪರಿಪರಿ ರೂಪಗೆ ಪರಮಾನಂದಗೆ

ಪುರಂದರವಿಠಲಗೆ ಜಯ ಮಂಗಲ || ೩ ||
***

maMgalaM jaya maMgalaM

mukuTake maMgala matsyAvatArage
muKake maMgala muddu kUrmanige
sukaMThake maMgala sUkara roopage
naKake maMgala narasiMhage || 1 ||

vakShake maMgala vaTu vAmanage
pakShake maMgala paraSurAmanige
kakShake maMgala kAkustha rAmage
kukShige maMgala SreekRuShNage || 2 ||

UrugaLige maMgala uttama buddhage
caraNake maMgala celuva kalkige
paripari roopage paramAnaMdage
puraMdaraviThalage jaya maMgala || 3 ||
***



ಜಯ ಮಂಗಳಂ ನಿತ್ಯ ಶುಭ ಮಂಗಳಂ    ||ಪ||

ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ                  ||೧||

ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ                     ||೨||

ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ         ||೩||
***

No comments:

Post a Comment