Showing posts with label ಅವತರಿಸಿದ ರಾಜ ಋಜುಗಣ ಮಹಾರಾಜ others vadiraja teertha stutih. Show all posts
Showing posts with label ಅವತರಿಸಿದ ರಾಜ ಋಜುಗಣ ಮಹಾರಾಜ others vadiraja teertha stutih. Show all posts

Wednesday, 1 September 2021

ಅವತರಿಸಿದ ರಾಜ ಋಜುಗಣ ಮಹಾರಾಜ ankita others vadiraja teertha stutih

 ಶ್ರೀ ೧೦೮ ಶ್ರೀ ಶ್ರೀ ಚಂದ್ರಿಕಾಚಾರ್ಯರು   ವಾದಿರಾಜರನ್ನು ಕುರಿತು ರಚಿಸಿದ ಕೃತಿ—


ರಾಗ -ಪೂರ್ವಿ . ತಾಳ —ಆದಿ 


ಅವತರಿಸಿದ ರಾಜ  ಋಜುಗಣ ಮಹಾರಾಜ 

ಅವತರಿಸಿದ  ಲಾತವ್ಯ ದೇವರೆನುವರೆ 

ಪವನಮತಾಂಬುಧಿ ।ಚಂದ್ರಮನು ಖರೆ ॥


ದುಷ್ಟರಾದ ದುರ್ವಾದಿಗಳನು ।ಎದೆ ।

ಮೆಟ್ಟುತ ದುಃಶಾಸ್ತ್ರವ ಖಂಡಿಸಿ ।ಹುಡಿ


ಗುಟ್ಟುತ ವಾಗ್ಬಾಣದಿ ಸುಜನರ ।ಮನ

ದಿಷ್ಟ ಸಲಿಸಿ ಶ್ರುತಿ ಸಮ್ಮತವೆನಿಸಿಹ।


ಶ್ರೇಷ್ಟವಾದ ಮಾರುತ ಮತ ಠೆಕ್ಕೆಯ

ನೆಟ್ಟು  ಕುಸುಯದಂದದಿ ॥ದೃಢ ಪಡಿಸುತ॥


ಶಿಷ್ಟ ಸಂಪ್ರದಾಯವ ಪರಿಪಾಲಿಸಿ

ಸ್ಪಷ್ಟ ಪಡಿಸಿ ಶುಚಿ ಸಿದ್ಧಾಂತವ ತಿಳಿ

ಗೊಟ್ಟು ಲಲಿತವಹ ಪ್ರಾಕೃತದೊಳು ।ಮನ -


ಮುಟ್ಟಿ ನೋಡೆ ।ಕೈಗನ್ನಡಿಯೊಮದದು

ದೃಷ್ಟಿ ಪಥಕಮ ತೋರುವ ವೋಲ್ ಗೈಯುತ॥


ಸೃಷ್ಟಿಕರ್ತ ಪರಮೇಷ್ಟಿ ಜನಕ ಸಿರಿ 

ಕೃಷ್ಣನ ಪದ  ಮನಮುಟ್ಟಿ   ಸೇವಿಸಲು॥॥


॥ಹರಿ ಸಮರ್ಪಣೆ॥

***