Audio by Vidwan Sumukh Moudgalya
ಶ್ರೀ ಪ್ರಸನ್ನ ಶ್ರೀನಿವಾಸದಾಸಾರ್ಯ ವಿರಚಿತ
ಶ್ರೀ ಚಂದ್ರದೇವರ ಸ್ತೋತ್ರ ಪದ
ರಾಗ : ನಾಟಕುರಂಜಿ ಆದಿತಾಳ
ವಾಮನ ಹಯಾಸ್ಯ ಶ್ರೀಹಂಸ ಧನ್ವಂತರಿ
ರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ॥ಪ॥
ಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತ
ಬ್ರಹ್ಮದೇವನ ಸುತನು ಬಹುಗುಣಿ ಅತ್ರಿ
ಬ್ರಹ್ಮಿಷ್ಠ ಈ ಋಷಿಯ ನೇತ್ರಜನು ಸೋಮ ನೀ
ಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ॥೧॥
ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರ
ಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರ
ದಧಿ ಶಂಖ ತುಷಾರಾಭ ಆಹ್ಲಾದ ಕೃಣ್ಣಮೋ
ಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ॥೨॥
ತ್ರಿಭುವನಗಳ ಜೈಸಿ ರಾಜಸೂಯ ಯಜ್ಞಗೈದಿ
ತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶ
ಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್
ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ॥೩॥
***
ತತ್ವಸುವ್ವಾಲಿಯ ಶ್ರೀಚಂದ್ರದೇವರ ಸ್ತೋತ್ರ
ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹ ಪರಿಹರಿಸಿ ಮನದಲ್ಲಿ। ಮನದಲ್ಲೆನಗೆ ಗರುಡ-
ವಾಹನನ ಸ್ಮರಣೆಯನು ಕರುಣಿಸೋ॥
***
by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಚಂದ್ರ ಸ್ತೋತ್ರ
ವಾಮನಹಯಾಸ್ಯಶ್ರೀಹಂಸ ಧನ್ವಂತರಿರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ ಪಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತಬ್ರಹ್ಮದೇವನ ಸುತನು ಬಹುಗುಣಿ ಅತ್ರಿಬ್ರಹ್ಮಿಷ್ಠ ಈ ಋಷಿಯ ನೇತ್ರಜನುಸೋಮನೀಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ 1
ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರದಧಿಶಂಖ ತುಷಾರಾಭ ಆಹ್ಲಾದ ಕೃಣ್ಣಮೋಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ 2
ತ್ರಿಭುವನಗಳ ಜೈಸಿ ರಾಜಸೂಯ ಯಜÕಗೈದಿತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ 3
******