Sunday, 25 July 2021

ವಾಮನ ಹಯಾಸ್ಯ ಶ್ರೀಹಂಸ ankita prasannashreenivasa ಚಂದ್ರದೇವ ಸ್ತೋತ್ರ ಪದ VAMANA HAYASYA SRI HAMSA CHANDRA DEVA STOTRA

 

Audio by Vidwan Sumukh Moudgalya


 ಶ್ರೀ ಪ್ರಸನ್ನ ಶ್ರೀನಿವಾಸದಾಸಾರ್ಯ ವಿರಚಿತ 


 ಶ್ರೀ ಚಂದ್ರದೇವರ ಸ್ತೋತ್ರ ಪದ 


 ರಾಗ : ನಾಟಕುರಂಜಿ   ಆದಿತಾಳ


ವಾಮನ ಹಯಾಸ್ಯ ಶ್ರೀಹಂಸ ಧನ್ವಂತರಿ

ರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ॥ಪ॥


ಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತ

ಬ್ರಹ್ಮದೇವನ ಸುತನು ಬಹುಗುಣಿ ಅತ್ರಿ

ಬ್ರಹ್ಮಿಷ್ಠ ಈ ಋಷಿಯ ನೇತ್ರಜನು ಸೋಮ ನೀ

ಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ॥೧॥


ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರ

ಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರ

ದಧಿ ಶಂಖ ತುಷಾರಾಭ ಆಹ್ಲಾದ ಕೃಣ್ಣಮೋ

ಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ॥೨॥


ತ್ರಿಭುವನಗಳ ಜೈಸಿ ರಾಜಸೂಯ ಯಜ್ಞಗೈದಿ

ತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶ

ಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್

ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ॥೩॥

***

ತತ್ವಸುವ್ವಾಲಿಯ ಶ್ರೀಚಂದ್ರದೇವರ ಸ್ತೋತ್ರ


ರೋಹಿಣೀರಮಣ ಮದ್ದೇಹಗೇಹಾದಿಗಳ

ಮೋಹ ಪರಿಹರಿಸಿ ಮನದಲ್ಲಿ। ಮನದಲ್ಲೆನಗೆ ಗರುಡ-

ವಾಹನನ ಸ್ಮರಣೆಯನು ಕರುಣಿಸೋ॥

***

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಚಂದ್ರ ಸ್ತೋತ್ರ

ವಾಮನಹಯಾಸ್ಯಶ್ರೀಹಂಸ ಧನ್ವಂತರಿರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ ಪಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತಬ್ರಹ್ಮದೇವನ ಸುತನು ಬಹುಗುಣಿ ಅತ್ರಿಬ್ರಹ್ಮಿಷ್ಠ ಈ ಋಷಿಯ ನೇತ್ರಜನುಸೋಮನೀಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ 1

ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರದಧಿಶಂಖ ತುಷಾರಾಭ ಆಹ್ಲಾದ ಕೃಣ್ಣಮೋಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ 2

ತ್ರಿಭುವನಗಳ ಜೈಸಿ ರಾಜಸೂಯ ಯಜÕಗೈದಿತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ 3 
******

No comments:

Post a Comment