Monday 26 July 2021

ವರವ ಕೊಡೆ ತಾಯಿ ವರವ ಕೊಡೆ ತಾಯಿ ವರವ ಕೊಡೆ ankita prasannavenkata

 ವರವ ಕೊಡೆ ತಾಯಿ ವರವ ಕೊಡೆ ತಾಯಿ ವರವ ಕೊಡೆ


ಶರಧಿ ಸಂಪನ್ನೆ ಕೇಳಿ ಸೆರಗೊಡ್ಡಿ ಬೇಡುವಂಥಾ || pa ||


ಬಾಗಿಲು ತೋರಣ ಕಟ್ಟಿ ಮದುವೆ ಮುಂಜಿ ನಾಮಕರಣ | ಅನುಗಾಲ ಇರುವಂಥ ವರವ ಕೊಡೆ || 1 ||


ಮಾಡಿಯ ಮನೆಯೊಳಗೇ ಜೋಡು ತೊಟ್ಟಿಲ ಕಟ್ಟಿ ಜೋಗುಳ ಹಾಡುವಂಥ ವರವ ಕೊಡೆ  || 2 ||


ಅಷ್ಟೈಶ್ವರ್ಯ ಸೌಭಾಗ್ಯ ಅನುಗಾಲ ಇರುವಂಥ  ವರವ ಕೊಡೆ ತಾಯೆ ವರವ ಕೊಡೆ || 3 ||


ಕಟ್ಟಿದ ಮಾಂಗಲ್ಯ ಕರಿಯ ಮಣಿಸರ ಸ್ಥಿರವಾಗೇ ಇರುವಂಥ ವರವ ಕೊಡೆ || 4 ||


ಹೆಣ್ಣು ಮಕ್ಕಳ ಹಡೆದು  ಹೊನ್ನು ಸೆರಗಿಲಿ ಕಟ್ಟಿ | ಕನ್ಯಾದಾನ ಮಾಡುವಂಥ ವರವ ಕೊಡೆ  || 5 ||


ಗಂಡು ಮಕ್ಕಳ ಹಡೆದು ಕುಲವನ್ನುದ್ಧರಿಸುವ | ಬಿಂದುಲಿ ಇಡುವಂಥ ಮಗನ ಕೊಡೆ || 6 ||


ಶ್ಯಾಲ್ಲನ ಸುಘೃತ  ಪಂಚ ಭಕ್ಷ್ಯ  ಪರಮಾನ್ನ ನೈವೇದ್ಯ ಇಡುವಂಥ ವರವ ಕೊಡೆ || 7 ||


ಅನ್ನ ದಾನ ವಸ್ತ್ರ ದಾನ ಗೃಹ ದಾನ ಭೂ ದಾನ | ಗೋದಾನ ಕೊಡುವಂಥ ವರವ ಕೊಡೆ || 8 ||


ರಂಗ ನಾಯಕಿ ನಿನ್ನ ಮುಡಿಯ ಮೇಲಿರುವಂಥ| ಪ್ರಸನ್ನವೆಂಕಟನಾರಸಿ ಹೂವ ಕೊಡೆ ಐದು ಹೂವ ಕೊಡೆ || 9 ||

***


Varava koḍe tāyi varava koḍe tāyi varava koḍe


śaradhi sampanne kēḷi seragoḍḍi bēḍuvanthā || pa ||


bāgilu tōraṇa kaṭṭi maduve mun̄ji nāmakaraṇa | anugāla iruvantha varava koḍe || 1 ||


māḍiya maneyoḷagē jōḍu toṭṭila kaṭṭi jōguḷa hāḍuvantha varava koḍe  || 2 ||


aṣṭaiśvarya saubhāgya anugāla iruvantha  varava koḍe tāye varava koḍe || 3 ||


kaṭṭida māṅgalya kariya maṇisara sthiravāgē iruvantha varava koḍe || 4 ||


heṇṇu makkaḷa haḍedu  honnu seragili kaṭṭi | kan’yādāna māḍuvantha varava koḍe  || 5 ||


gaṇḍu makkaḷa haḍedu kulavannud’dharisuva | binduli iḍuvantha magana koḍe || 6 ||


śyāllana sughr̥ta  pan̄ca bhakṣya  paramānna naivēdya iḍuvantha varava koḍe || 7 ||


anna dāna vastra dāna gr̥ha dāna bhū dāna | gōdāna koḍuvantha varava koḍe || 8 ||


raṅga nāyaki ninna muḍiya mēliruvantha| prasannaveṅkaṭanārasi hūva koḍe aidu hūva koḍe || 9 ||

***



No comments:

Post a Comment