Showing posts with label ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ indiresha BAARE VENKATARAMANI SRIDEVI NEE BARE. Show all posts
Showing posts with label ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ indiresha BAARE VENKATARAMANI SRIDEVI NEE BARE. Show all posts

Wednesday, 15 December 2021

ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ankita indiresha BAARE VENKATARAMANI SRIDEVI NEE BARE





ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ||ಪ||

ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ||

ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊeಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ||

ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ||

ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮ
ಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ ||

ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆ
ಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ||

ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀ
ನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ||
****

ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ಪ


ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ಅ.ಪ.


ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದುಹೀನ ಮಾನವನಿಗೆ ನೀನು ಬರುವಿ ಎಂಬೊಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ 1

ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ 2

ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ 3

ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ4

ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ 5

****