ಶ್ರೀ ಪುರಂದರದಾಸರ ಕೃತಿ
ರಾಗ ಭೈರವಿ ಆದಿತಾಳ
ಒಂದೇ ಮನದಿ ನಾನಿಂದು ನಮಿಸುವೆ ।
ಸಿಂಧುಶಯನನೆ ಮಂದಹಾಸನೆ ॥ ಪ ॥
ಬಂದ ದುರಿತಗಳೊಂದು ಕೊಡದೆ ।
ತಂದೆ ಸಲಹಬೇಕೋ ॥ ಅ ಪ ॥
ನಿನ್ನ ಹೊರತು ನಾನನ್ಯರೊಬ್ಬರ ।
ಇನ್ನು ಕಾಣೆನೊ ಎನ್ನ ಸಾಕುವ ॥
ಚೆನ್ನವಾಗಿ ಪ್ರಸನ್ನನಾಗೆಲೋ ।
ಘನ್ನ ಮಹಿಮ ನೀನು ॥ 1 ॥
ಕೋರಿ ನಿನ್ನನು ಬಾರಿಬಾರಿಗೆ ।
ಸಾರಿದೆ ನಾ ವಾರಿಜಾಕ್ಷನೆ ॥
ತೋರು ನಿನ್ನಯ ಚಾರುಚರಣವ ಅ - ।
ಪಾರ ಕರುಣಾನಿಧಿಯೆ ॥ 2 ॥
ತುಂಗ ನಿನ್ನ ಪಾದಾಬ್ಜಭೃಂಗ ನಾ ।
ಮಂಗಳಾಂಗನೆ ಭಂಗ ಮಾಡದೆ ॥
ರಂಗ ನಿನ್ನಂತರಂಗ ಭಕ್ತರ ।
ಸಂಗ ನೀಡಬೇಕೋ ॥ 3 ॥
ಕಾಮಜನಕ ಸುದಾಮಮಿತ್ರನೆ ।
ದಾಮ ಉದರನೆ ನೇಮದಿಂದಲಿ ॥
ರಾಮ ನಿನ್ನಯ ನಾಮ ಭಜನೆಗಳ ।
ಪ್ರೇಮಾ ಮಾಡಬೇಕೋ ॥ 4 ॥
ದೇವದೇವನೆ ಸಾರ್ವಭೌಮನೆ ।
ಯಾವ ಕಾಲದಿ ಯಾವ ದೇಶದಿ ॥
ಜೀವರೆಲ್ಲರ ಕಾವ ದೇವನೆ ।
ಗೋವಿಂದ ಗೋಪತಿಯೇ ॥ 5 ॥
ಈಶ ಎನಗೆಂಬೆ ಜಗದೀಶ ನಿನ್ನನು ।
ಶ್ರೀಶ ಮನ್ನಿಸೋ ಶೇಷಶಯನನೆ ॥
ದಾಸ ಎನ್ನನು ಘಾಸಿ ಮಾಡದೆ ।
ಪೋಷಿಸಬೇಕೋ ನೀನು ॥ 6 ॥
ಪರಾಕು ನಾ ಎಂಬೆ ಪರಾಕು ಮಾಡದೆ ।
ಹರಾದಿವಂದ್ಯನೆ ಸುರರಪಕ್ಷನೆ ॥
ಚರಾಚರದಲ್ಲಿ ವಿರಾಜಿತ ತಂದೆ ।
ಶ್ರೀಪುರಂದರವಿಠ್ಠಲರಾಯ ॥ 7 ॥
***
ರಾಗ ಭೈರವಿ ಆದಿತಾಳ
ಒಂದೇ ಮನದಿ ನಾನಿಂದು ನಮಿಸುವೆ ।
ಸಿಂಧುಶಯನನೆ ಮಂದಹಾಸನೆ ॥ ಪ ॥
ಬಂದ ದುರಿತಗಳೊಂದು ಕೊಡದೆ ।
ತಂದೆ ಸಲಹಬೇಕೋ ॥ ಅ ಪ ॥
ನಿನ್ನ ಹೊರತು ನಾನನ್ಯರೊಬ್ಬರ ।
ಇನ್ನು ಕಾಣೆನೊ ಎನ್ನ ಸಾಕುವ ॥
ಚೆನ್ನವಾಗಿ ಪ್ರಸನ್ನನಾಗೆಲೋ ।
ಘನ್ನ ಮಹಿಮ ನೀನು ॥ 1 ॥
ಕೋರಿ ನಿನ್ನನು ಬಾರಿಬಾರಿಗೆ ।
ಸಾರಿದೆ ನಾ ವಾರಿಜಾಕ್ಷನೆ ॥
ತೋರು ನಿನ್ನಯ ಚಾರುಚರಣವ ಅ - ।
ಪಾರ ಕರುಣಾನಿಧಿಯೆ ॥ 2 ॥
ತುಂಗ ನಿನ್ನ ಪಾದಾಬ್ಜಭೃಂಗ ನಾ ।
ಮಂಗಳಾಂಗನೆ ಭಂಗ ಮಾಡದೆ ॥
ರಂಗ ನಿನ್ನಂತರಂಗ ಭಕ್ತರ ।
ಸಂಗ ನೀಡಬೇಕೋ ॥ 3 ॥
ಕಾಮಜನಕ ಸುದಾಮಮಿತ್ರನೆ ।
ದಾಮ ಉದರನೆ ನೇಮದಿಂದಲಿ ॥
ರಾಮ ನಿನ್ನಯ ನಾಮ ಭಜನೆಗಳ ।
ಪ್ರೇಮಾ ಮಾಡಬೇಕೋ ॥ 4 ॥
ದೇವದೇವನೆ ಸಾರ್ವಭೌಮನೆ ।
ಯಾವ ಕಾಲದಿ ಯಾವ ದೇಶದಿ ॥
ಜೀವರೆಲ್ಲರ ಕಾವ ದೇವನೆ ।
ಗೋವಿಂದ ಗೋಪತಿಯೇ ॥ 5 ॥
ಈಶ ಎನಗೆಂಬೆ ಜಗದೀಶ ನಿನ್ನನು ।
ಶ್ರೀಶ ಮನ್ನಿಸೋ ಶೇಷಶಯನನೆ ॥
ದಾಸ ಎನ್ನನು ಘಾಸಿ ಮಾಡದೆ ।
ಪೋಷಿಸಬೇಕೋ ನೀನು ॥ 6 ॥
ಪರಾಕು ನಾ ಎಂಬೆ ಪರಾಕು ಮಾಡದೆ ।
ಹರಾದಿವಂದ್ಯನೆ ಸುರರಪಕ್ಷನೆ ॥
ಚರಾಚರದಲ್ಲಿ ವಿರಾಜಿತ ತಂದೆ ।
ಶ್ರೀಪುರಂದರವಿಠ್ಠಲರಾಯ ॥ 7 ॥
***
pallavi
onde manadi nAnindu namisuve sindhu shayanane mandahAsane
anupallavi
banda duritagaLondu kUDade tande salaha bEkO
caraNam 1
ninna horadu nAnanyarobbara innu kANeno enna sAkuva cennAgi prasannAgelo ghanna mahima nInu
caraNam 2
kOri ninnanu bAribArige sAride nA vArijAkSane tOru ninnaya cAru caraNava apAra karuNAnidhE
caraNam 3
tunga ninna pAdAbja bhrnga nA mangaLAngane bhanga mADade ranga ninnantaranga bhaktara sanga nIDa bEko
caraNam 4
kAma janaka sudAma mitrane dAmavudarane nEmadindali rAma ninnaya nAma bhajanegaLa prEma mADa bEko
caraNam 5
dEvadEvane sArvabhaumane yAva kAladi yAva dEshadi jIvarellara kAva dEvane gOvinda gOpatiye
caraNam 6
Isha enudembe jagadIsha ninnanu shrIsha manniso shESa shayanane dAsa ennanu gAsi mADade pOSisa bEkO nInu
caraNam 7
parAku embe nA parAku mADade harAdi vandyane surara pakSane carAcaradali virAjita tande purandara viTTalarAya
***