Showing posts with label ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ rajesha hayamukha. Show all posts
Showing posts with label ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ rajesha hayamukha. Show all posts

Thursday, 5 August 2021

ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಭೀಮಾನದೀ ತೀರಾವಾಸ

ಪಾಹಿ ಪಾಹಿ ಪಾಂಡುರಂಗ ಪ


ಜಾರಚೋರನೆಂಬರೆಂದು

ಗೋಕುಲವ ಬಿಟ್ಟು ಬಂದೆ

ಜಾರಚೋರನೆಂದು ನಿನ್ನ

ಪುಂಡರೀಕ ಮುನಿಕರೆದ ||ಪಾಂಡುರಂಗ|| 1


ಅನ್ಯ ಭೋಗಗಳನು ಬಿಟ್ಟು

ನಿನ್ನ ಪಾದವ ಧ್ಯಾನಿಸುವರ

ಮನದಿಷ್ಟವನೀವನೆಂದು

ತೋರಿಸುವೇ ಚಿಹ್ನೆಯಿಂದ ||ಪಾಂಡುರಂಗ|| 2


ರಾಜೇಶ ಶ್ರೀಹಯಮುಖ

ಜ್ಞಾನಶೂನ್ಯಾರ್ತರ್ಗೆ ಸಾಯುಜ್ಯವಿತ್ತು ಪೊರೆವ ವಿಠಲ-

ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| 3

***