Showing posts with label ರಂಗಯ್ಯ ಮನಿಗೆ ಬಂದರೆ ಅಂತರಂಗದಿ ಗುಡಿಕಟ್ಟಿ shree krishna RANGAYYA MANIGE BANDARE ANTARANGADI GUDIKATTI. Show all posts
Showing posts with label ರಂಗಯ್ಯ ಮನಿಗೆ ಬಂದರೆ ಅಂತರಂಗದಿ ಗುಡಿಕಟ್ಟಿ shree krishna RANGAYYA MANIGE BANDARE ANTARANGADI GUDIKATTI. Show all posts

Tuesday, 23 March 2021

ರಂಗಯ್ಯ ಮನಿಗೆ ಬಂದರೆ ಅಂತರಂಗದಿ ಗುಡಿಕಟ್ಟಿ ankita shree krishna RANGAYYA MANIGE BANDARE ANTARANGADI GUDIKATTI

ರಾಗ : ಸುರುಟಿ    ತಾಳ : ಆದಿ

 Audio by Vidwan Sumukh Moudgalya


ಶ್ರೀ ವ್ಯಾಸರಾಜರ ಕೃತಿ 


ರಂಗಯ್ಯ ಮನಿಗೆ ಬಂದರೆ ಅಂತ-

ರಂಗದಿ ಗುಡಿಕಟ್ಟಿ ಕುಣಿವೆ ನಾ ॥ಪ॥


ಎಳೆ ತುಳಸಿವನ ಮಾಲೆಯಾ

 ಎಳೆ ನೀಲದ ಮೈಯಧಾಳದಾ

ಪೊಳೆವ ಪೊಂಗೊಳೂದೆ, ಚೆಲುವನನಾ ನಮ್ಮ

ನಿಲಯಕ್ಕೆ ಬಂದ ಭಾಗ್ಯವು ನೋಡ ॥೧॥


ಹಾವು ನ್ಯಾವಳವಾಯಿತು

ದಾವಾನಳ ತಂಪಾಯಿತು

ಬೇವು ಸಖ್ಖರೆಯಾಯಿತು ನಮ್ಮ

ದೇವಕ್ಕಿ  ವರಸುತನೊಲಿದಾರೆ ॥೨॥


ಬಾಡಿದ ಮಾವು ಪಲ್ಲವಿಸಿತು, 

ಕಾಡಿದಾ ಮನ ಬೋಳೈಸೀತು

ಮಾಧಿದ ಮನದ ತಾಪವು ಬ್ಯಾಗಾ ಅತ್ತ

ಲೋಡಿತು ಬಂದ ಭರದಿಂದ ನೋಡ ॥೩॥


ಬಿಸಿಲು ಬೆಳೆದಿಂಗಳಾಯಿತು, ತಾ-

ಮಸಹೋಗಿ ಸುಜ್ಞಾನವಾಯಿತು

ಬಿಸಜನಾಭನ ಕೃಪಿಯಾದರೆ  ವಿಷ

 ಹೋಗಿ ಅಮೃತವಾಯಿತು ನೋಡ ॥೪॥


 ನಾನರಸಿ ಕಾಣೆ ಕೃಷ್ಣನ ತಾ -

ನ್ಯನ್ನ ನಂಬಿರುವನಲ್ಲಾ

 ಏನಾದರೂ ನಮ್ಮಅಗಲಾದೆ

 ಮಾನಾಭಿಮಾನದೊಡಿಯಾ ಶಿರಿ ಕೃಷ್ಣ ॥೫॥

***



ರಂಗಯ್ಯ ಮನೆಗೆ ಬಂದರೆ ಅಂತರಂಗದಿ 

ಗುಡಿಕಟ್ಟಿ ಕುಣಿವೆ ನಾ ||ಪ||


ಎಳೆ ತುಳಸಿಯ ವನ ಮಾಲೆಯು ರಂಗಗೆ|

ಎಳೆ ನೀಲದ ಮೈಯ ಢಾಳವು||

ಪೊಳೆವ ಪೊಂಗೊಳಲೊಪ್ಪೆ, ಚೆಲುವನು ನಮ್ಮ|

ನಿಲಯಕ್ಕೆ ಬಂದ ಭಾಗ್ಯವು ನೋಡ |||||


ಬಾಡಿದ ಮಾವು ಪಲ್ಲವಿಸಿತು, ಹರಿ|

ನೋಡಲು ಜಗವು ಫುಲ್ಲವಿಸಿತು||

ಕೂಡಿದ ಮನದ ತಾಪಗಳೆಲ್ಲ, ಎತ್ತ-

ಲೋಡಿತೊ ಹರಿ ಬಂದ ಭರದಿಂದ ನೋಡ||೨||


ಬಿಸಿಲು ಬೆಳದಿಂಗಳಾಯಿತು ತಾ-

ಮಸ ಹೋಗಿ| ಜ್ಞಾನೋದಯವಾಯಿತು

ಕುಸುಮನಾಭನು ತಾ ಬಂದರೆ ಅಲ್ಲಿ|

ವಿಷ ಹೋಗಿ ಅಮೃತವಾಯಿತು ನೋಡ ||೩||


ಹಾವು ನ್ಯಾವಳವಾಯಿತು ಅಲ್ಲಿ|

ದಾವಾನಳವು ತಂಪಾಯಿತು||

ಬೇವು ಸಕ್ಕರೆ ಆಯಿತು ನಮ್ಮ|

ದೇವಕಿಸುತ ತಾ ಬಂದರೆ ನೋಡ ||೪||


ಜಾಣೆರರಸ ನೋಡು ರಂಗನ ಅವ

ತಾನಾಗಿ ಬೆನ್ನ ಬಿಡ ನಮ್ಮನು||

ಏನಾದರೂ ಅಗಲದಲೆ ನಮ್ಮ|

ಮಾನಾಭಿಮಾನದ ಒಡೆಯ ಶ್ರೀ ಕೃಷ್ಣ ||೫||

***


raMgayya manege baMdare aMtaraMgadi 

guDikaTTi kuNive nA ||pa||


eLe tuLasiya vana mAleyu raMgage|

eLe nIlada maiya DhALavu||

poLeva poMgoLaloppe, celuvanu namma|

nilayakke baMda BAgyavu nODa |||||


bADida mAvu pallavisitu, hari|

nODalu jagavu Pullavisitu||

kUDida manada tApagaLella, etta-

lODito hari baMda BaradiMda nODa||2||


bisilu beLadiMgaLAyitu tA-

masa hOgi| j~jAnOdayavAyitu

kusumanABanu tA baMdare alli|

viSha hOgi amRutavAyitu nODa ||3||


hAvu nyAvaLavAyitu alli|

dAvAnaLavu taMpAyitu||

bEvu sakkare Ayitu namma|

dEvakisuta tA baMdare nODa ||4||


jANerarasa nODu raMgana ava

tAnAgi benna biDa nammanu||

EnAdarU agaladale namma|

mAnABimAnada oDeya SrI kRuShNa ||5||

***


  (raga tala may differ in audio)


ರಂಗಯ್ಯ ಮನೆಗೆ ಬಂದರೆ ಅಂತರಂಗದಿ 

ಗುಡಿಕಟ್ಟಿ ಕುಣಿವೆ ನಾ ||ಪ||


ಎಳೆ ತುಳಸಿಯ ವನ ಮಾಲೆಯು ರಂಗಗೆ|

ಎಳೆ ನೀಲದ ಮೈಯ ಢಾಳವು||

ಪೊಳೆವ ಪೊಂಗೊಳಲೊಪ್ಪೆ, ಚೆಲುವನು ನಮ್ಮ|

ನಿಲಯಕ್ಕೆ ಬಂದ ಭಾಗ್ಯವು ನೋಡ |||||


ಬಾಡಿದ ಮಾವು ಪಲ್ಲವಿಸಿತು, ಹರಿ|

ನೋಡಲು ಜಗವು ಫುಲ್ಲವಿಸಿತು||

ಕೂಡಿದ ಮನದ ತಾಪಗಳೆಲ್ಲ, ಎತ್ತ-

ಲೋಡಿತೊ ಹರಿ ಬಂದ ಭರದಿಂದ ನೋಡ||೨||


ಬಿಸಿಲು ಬೆಳದಿಂಗಳಾಯಿತು ತಾ-

ಮಸ ಹೋಗಿ| ಜ್ಞಾನೋದಯವಾಯಿತು

ಕುಸುಮನಾಭನು ತಾ ಬಂದರೆ ಅಲ್ಲಿ|

ವಿಷ ಹೋಗಿ ಅಮೃತವಾಯಿತು ನೋಡ ||೩||


ಹಾವು ನ್ಯಾವಳವಾಯಿತು ಅಲ್ಲಿ|

ದಾವಾನಳವು ತಂಪಾಯಿತು||

ಬೇವು ಸಕ್ಕರೆ ಆಯಿತು ನಮ್ಮ|

ದೇವಕಿಸುತ ತಾ ಬಂದರೆ ನೋಡ ||೪||


ಜಾಣೆರರಸ ನೋಡು ರಂಗನ ಅವ

ತಾನಾಗಿ ಬೆನ್ನ ಬಿಡ ನಮ್ಮನು||

ಏನಾದರೂ ಅಗಲದಲೆ ನಮ್ಮ|

ಮಾನಾಭಿಮಾನದ ಒಡೆಯ ಶ್ರೀ ಕೃಷ್ಣ ||೫||

***


raMgayya manege baMdare aMtaraMgadi 

guDikaTTi kuNive nA ||pa||


eLe tuLasiya vana mAleyu raMgage|

eLe nIlada maiya DhALavu||

poLeva poMgoLaloppe, celuvanu namma|

nilayakke baMda BAgyavu nODa |||||


bADida mAvu pallavisitu, hari|

nODalu jagavu Pullavisitu||

kUDida manada tApagaLella, etta-

lODito hari baMda BaradiMda nODa||2||


bisilu beLadiMgaLAyitu tA-

masa hOgi| j~jAnOdayavAyitu

kusumanABanu tA baMdare alli|

viSha hOgi amRutavAyitu nODa ||3||


hAvu nyAvaLavAyitu alli|

dAvAnaLavu taMpAyitu||

bEvu sakkare Ayitu namma|

dEvakisuta tA baMdare nODa ||4||


jANerarasa nODu raMgana ava

tAnAgi benna biDa nammanu||

EnAdarU agaladale namma|

mAnABimAnada oDeya SrI kRuShNa ||5||

***