ಅಚ್ಯುತಾನಂದ ಗೋವಿಂದನೆಂಬ ವಸ್ತು ಎನ್ನ ಕೈಸೇರಿತು ||ಪ||
ಎಷ್ಟು ಪುಣ್ಯವ ಮಾಡಿದೆನೊ ಪರವಸ್ತು ಎನ್ನ ಕೈ ಸೇರಿತು ||ಅ||
ವೆಚ್ಚವ ಮಾಡಲಾಗದು ಇದು ಮುಚ್ಚಿ ಬಚ್ಚಿಡಲಾಗದು
ಹೊತ್ತಾರೆದ್ದು ಕೀರ್ತನೆ ಮಾಡುವ ವಸ್ತು ಎನ್ನ ಕೈ ಸೇರಿತು ||
ಕ್ಷೀರಸಾಗರದಮೃತವ ತಂದ ಕಾಮಧೇನು ಕೈಯ ಸೇರಿತು
ನೀಲ ವರ್ಣನಾದ ಪಾಲಿಪ ಹೊಸ ದಿವ್ಯ ನೀಲ ಮಾಣಿಕ್ಯ ಕೈಯ ಸೇರಿತು ||
ಸುರಮುನಿಗಳು ಕೂಡಲು ಇದು ಹರಳಿಗೆ ಬೆಲೆಯಾಗದು
ವರಾ ಪುರಂದರವಿಠಲರಾಯನೆಂಬ ಒಡವೆ ಎನ್ನ ಕೈಯ ಸೇರಿತು ||
****
ಉದಯರಾಗ ಛಾಪು ತಾಳ (raga, taala may differ in audio)
pallavi
acyutAnanda gOvindanemba vastu enna kaisEridu
anupallavi
eSTu puNyava mADideno parvastu enna kai sEridu
caraNam 1
veccava mADalAgadu idu mucci bacciDalAgadu
hottAreddu kIrtane mADuva vastu enna kai sEridu
caraNam 2
kSIra sAgaradamrtava tanda kAmadhEnu kaiya sEridu
nIla varNAnAda pAlipa hosa divya nIla mANikya kaiya sEridu
caraNam 3
sura munigaLu kUDalu idu haraLige beleyAgadu
varada purandara viTTalarAyanemba oDave enna kaiya sEridu
***
ಅಚ್ಯುತಾನಂತ ಗೋವಿಂದನೆಂಬ ವಸ್ತು ಎನ್ನ ಕೈಸೇರಿತು || ಪ ||
ಎಷ್ಟು ಪುಣ್ಯವ ಮಾಡಿದೆನೊ ಪರವಸ್ತು ಎನ್ನ ಕೈ ಸೇರಿತು || ಅ. ಪ ||
ವೆಚ್ಚವ ಮಾಡಲಾಗದು ಇದು ಮುಚ್ಚಿ ಬಚ್ಚಿಡಲಾಗದು ಹೊತ್ತಾರೆದ್ದು ಕೀರ್ತನೆ ಮಾಡುವ ವಸ್ತು ಎನ್ನ ಕೈ ಸೇರಿತು || 1 ||
ಕ್ಷೀರಸಾಗರದಮೃತವ ತಂದ ಕಾಮಧೇನು ಕೈಯ ಸೇರಿತು ನೀಲ ವರ್ಣನಾದ ಪಾಲಿಪ ಹೊಸ ದಿವ್ಯ ನೀಲ ಮಾಣಿಕ್ಯ ಕೈಯ ಸೇರಿತು || 2 ||
ಸುರಮುನಿಗಳು ಕೂಡಲು ಇದು ಹರಳಿಗೆ ಬೆಲೆಯಾಗದು ವರಾ ಪುರಂದರವಿಠಲರಾಯನೆಂಬ ಒಡವೆ ಎನ್ನ ಕೈಯ ಸೇರಿತು || 3 ||
***
Acyutananta govindanemba vastu enna kaiseritu || pa ||
estu punyava madideno paravastu enna kai seritu || a. Pa ||
veccava madalagadu idu mucci baccidalagadu hottareddu kirtane maduva vastu enna kai seritu || 1 ||
ksirasagaradamrtava tanda kamadhenu kaiya seritu nila varnanada palipa hosa divya nila manikya kaiya seritu || 2 ||
suramunigalu kudalu idu haralige beleyagadu vara purandaravithalarayanemba odave enna kaiya seritu || 3 ||
***