Showing posts with label ಪಂಕಜ ನಯನ ಪಾವನ್ನ ಸುಖ jagannatha vittala. Show all posts
Showing posts with label ಪಂಕಜ ನಯನ ಪಾವನ್ನ ಸುಖ jagannatha vittala. Show all posts

Saturday, 14 December 2019

ಪಂಕಜ ನಯನ ಪಾವನ್ನ ಸುಖ ankita jagannatha vittala

ಜಗನ್ನಾಥದಾಸ ರು
ಪಂಕಜನಯನ ಪಾವನ್ನ ಸುಖ
ಸಂಕೂಲ ಮೂರುತಿ ಲಾಲಿಸು ಚಿನ್ನಾ
ವೆಂಕಟ ನಿಲಯಾ ಹಸೆಗೇಳು ಪ

ಕಮಲ ಸಂಭವಗಿತ್ತ ಕಮನೀಯ ಕಾಯ
ಸುಮನಸ ಜನತೆ ಸುಧೆಯನುಣಿಸಿ
ಭೂಮಿ ಚೋರನ ಕೊಂದ ಮುನಿಗಳೊಡೆಯ
ವಿಮಲ ಮೂರುತಿ ಹಸೆಗೇಳೋ 1

ನರಹರಿ ರೂಪದಿ ಬಂದು ದೈತ್ಯ
ನುರವ ಬಗೆದು ವಟು ರೂಪದಿ ನಿಂದ್ಯೋ
ದುರುಳ ರಾಯರನೆಲ್ಲ ಕೊಂದು ಲಂಕಾ
ಪುರದಾಧಿಪತಿಯ ಸದೆದ ದಯಸಿಂಧೋ
ಕರುಣಾಸಾಗರನೆ ಹಸೆಗೇಳೋ 2

ಯದುಜನೆನಿಸಿ ಎಲ್ಲಾ ಖಳರ ಜಯಿಸಿ
ಸುದತೇರ ವ್ರತವ ಕೆಡಿಸಿದತಿ ಧೀರ
ಕುದುರೆನೇರಿದ ಮಾಧಾರಾ ನಿನ್ನ
ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ
ಉದಧಿ ಶಯನನೆ ಹಸೆಗೇಳು 3

ಅಪ್ರತಿಮಲ್ಲ ಅನಂತಾ ಸುಹಜ
ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ
ಸ್ವ ಪ್ರಕಾಶಿತನೆ ಧೀಮಂತಾ ಅತಿ
ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ
ಸುಪ್ರದಾಯಕನೆ ಹಸೆಗೇಳೋ 4

ಪರಮ ಪುರುಷ ಪುಣ್ಯನಾಮಾ ಪರ
ಪುರಷೋತ್ತಮ ಪರಿಪೂರ್ಣ ಕಾಮಾ
ಶರಣರ ಭವವನ ಧೂಮಾ ಕೇತು
ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ
ಕರಿರಾಜವರದಾ ಹಸೆಗೇಳೋ 5

ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ
ಕ್ಲೇಶ ಕಳೆವ ಸುಕೀರ್ತೀ
ಚಿತ್ತಜ ಜನಕ ಹಸೆಗೇಳೋ 6

ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ
ಪಾರ ಮಹಿಮೆ ತಿಳಿವವನಿಹನೆ
ಮೂರು ಗುಣ ರಹಿತನೆ ದೋಷ ದೂರ ವಿದೂರ
ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7

ವ್ಯಾಳಮರ್ದನನೆ ವಿಗಮನಾ ತ್ರಿ
ಶೂಲ ಪಾಣಿಯ ಓಡಿಸಿದ ಖಳನಾ
ಸೋಲಿಸಿದಪ್ರತಿಸುಗುಣ ಹೇಮ
ಲಲಿತಾಂಗ ಹಸೆಗೇಳೋ 8

ಅಗಣಿತ ಜೌದಾರ್ಯ ಸಾರಾ ನಿನ್ನ
ಪೊಗಳ ಬಲ್ಲೆನೆ ಪಾತಕದೂರಾ
ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ
ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
********