Showing posts with label ಇಂದೆ ಕಂಡೆವು ಗುರುರಾಯನ ನಮ್ಮ prasannavenkata. Show all posts
Showing posts with label ಇಂದೆ ಕಂಡೆವು ಗುರುರಾಯನ ನಮ್ಮ prasannavenkata. Show all posts

Friday, 8 November 2019

ಇಂದೆ ಕಂಡೆವು ಗುರುರಾಯನ ನಮ್ಮ ankita prasannavenkata

by ಪ್ರಸನ್ನವೆಂಕಟದಾಸರು
ಇಂದೆ ಕಂಡೆವು ಗುರುರಾಯನ ನಮ್ಮತÀಂದೆ ಸತ್ಯಾಭಿನವತೀರ್ಥನ ಫಲಿಸಬಂದೊದಗಿತು ನಮ್ಮಸುಕೃತಆನಂದರಸಾಬ್ಧಿ ಉಕ್ಕೇರಿತು ಪ.

ಇದೀಗೆ ಕಲ್ಪದ್ರುಮ ಕಾಣಿರೈ ಅಹುದಿದೀಗೆ ಚಿಂತಾಮಣಿ ನೋಡಿರೈ ಮತ್ತಿದಿದೀಗೆಸುರಭಿಬಂದಿತೆನ್ನಿರೈ ತಮ್ಮಮುದದಿಂದ ಯತಿರೂಪವಾಯಿತೈ 1

ಬಡವರ ದೊರೆ ನಮ್ಮ ಗುರುರಾಯ ಈಪೊಡವಿಲಿ ಯಾಚಕರಾಶ್ರಯ ಆಪ್ತಹಡೆದ ತಾಯಿತಂದೇರ ಮರೆಸಿದ ಎಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ 2

ಭಕ್ತಿ ಪಥವ ನೋಡಿ ನಡೆವನು ಯತಿಮುಕುಟಮಣಿಗೆ ಸರಿಗಾಣೆನು ಜ್ಞಾನಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆಮುಕ್ತಿ ಮಂದಿರ

ವಾತ್ರ್ಯರುಹಿಸಿದಒಂದೊಂದು ಗುಣಗಳ ಮಹಿಮೆಯು ಮತ್ತೆಂದಿಗೆ ಹೊಗಳಲಿ ತೀರವುಹಿಂದಾದ ಪೂತರು ಅಹರು ಯತೀಂದ್ರನ ಸಾಮ್ಯಕೆ ಸರಿಯಾರು 4

ಗುರುಭಕ್ತಿನೆಲೆಕಳೆಮರೆಯದೆ ಶ್ರೀಧರಜೆ ರಾಘವಪಾದ ಜರಿಯದೆ ದೇವವರವೇದವ್ಯಾಸನ ಸೇವೆಗೆ ಒಂದರಘಳಿಗ್ಯಲಸ ತಾನೆಂದಿಗೆ 5

ಹೊನ್ನ ತೃಣದೊಲು ಸೂರ್ಯಾಡಿದ ವಿದ್ಯೋನ್ನತರ ತವರುಮನೆಯಾದಮನ್ನಿಪ ಸುಜನಚಕೋರವ ಹೊರವಪೂರ್ಣ ಚಂದಿರನಂತಲ್ಲೊಪ್ಪುವ 6

ತಪ್ತಲಾಂಛನ ತೀರ್ಥವೀವಾಗಭೃತ್ಯರುಪಟಳಕೊಲಿದು ನಲಿವನಾಗಕಪಟವ ಲೇಶಮಾತ್ರರಿಯನು ಇಂಥಗುಪ್ತ ಮಹಿಮಗೆಣೆಗಾಣೆನು 7

ಸಕಳ ಪುರಾಣೋಕ್ತ ದಾನವ ಬಿಡದಖಿಳ ಧರ್ಮವನೆಲ್ಲ ಮಾಡುವನಿಖಿಳತತ್ವವನೊರೆದು ಹೇಳುವ ಈಅಕಳಂಕನೆಂದೂ ನಮ್ಮನುಕಾವ8

ಕಷ್ಟ ಮೌನದಿ ವಾರಣಾಸಿಯ ಬಹುಶಿಷ್ಟರ ಸಲಹುತ ಯಾತ್ರೆಯ ಮಾಡಿತುಷ್ಟಿಬಡಿಸಿದಲ್ಲಿವಾಸರಬೇಡಿದಿಷ್ಟಾರ್ಥವನೀವನು ದಾಸರ 9

ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆನೂತನವಸನಹೊನ್ನಾರ್ಚನೆಗಿಟ್ಟು ಮುಂದೆನುತಿಸಿಹಿಗ್ಗುವ ನವಭಕುತಿಂದ ಈವ್ರತಕಾಗಲಿಲ್ಲ ಒಂದಿನಕುಂದು10

ಶ್ರೀಭಾಗವತಶಾಸ್ತ್ರ ಟೀಕನುಹರಿಗಾಭರಣವ ಮಾಡಿಟ್ಟನುಈ ಭೂಮಿಲಿಹ ಶಿಷ್ಯ ಜನರನು ತತ್ವಶೋಭಿತರನು ಮಾಡಿ ಹೊರೆದನು 11

ಬಲುಹಿಂದ ಯವನನ ಬಲದಲ್ಲಿ ಕೃಷ್ಣಒಳಪೊಕ್ಕು ಸದೆದ ಪರಿಯಲ್ಲಿಕಲಿನೃಪ ಮ್ಲೇಚ್ಛನ ಬಂಧನ ತಪೋಬಲದಿಂದ ಗುರುರಾಯ ಗೆಲಿದನು 12

ಭಕ್ತಿವಿರತಿಜ್ಞಾನಪೂರ್ಣನು ಸೇವಕ ಜನರಿಗೆ ಪ್ರಾಣಪ್ರಿಯನುಪ್ರಕಟಿಸಿದನು ನಿಜಕೀರ್ತಿಯನಿತ್ಯಸಕಲ ಸದ್ಗುಣಗಳ ವಾರ್ತೆಯ 13

ಈಪರಿಬಹು ಪಟ್ಟವಾಳುತ ದಿವ್ಯಶ್ರೀಪಾದವ್ರತ ಪೂರ್ಣ ತಾಳುತಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟಕಾಪುರುಷರ ಮೊತ್ತ ಗೆದ್ದಾತ 14

ಹರಿಗುಣ ಜಿಜ್ಞಾಸೆಯಿಂದ ಶ್ರೀಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀಹರಿನಾಮ ಸ್ಮರಣಶ್ರವಣದಿಂದ ಶ್ರೀಹರಿಪ್ರೀತಿಬಡಿಸಿದ ನಲವಿಂದ15

ನಿರುತ ಉದಯಸ್ನಾನ ಮೌನವ ಶ್ರೀಗುರುಮಧ್ವಶಾಸ್ತ್ರವ್ಯಾಖ್ಯಾನವ ಮಹಾಗೀರ್ವಾಣ ವಾಕ್ಯದಿಂದ ಪೇಳುವ ಆತ್ಮಗುರುಗಳ 
ಸ್ಮರಣೆಯ ಮಾಡುವ 16

ಗುರುಸತ್ಯನಾಥರ ತಂದನು ನಿಜಗುರುಪದವೇ ಗತಿಯೆಂದನು ತನ್ನಸ್ಮರಣೇಲಿ ಇಹರ ಕಾವನು ಬೇಡಿದರೆ ಅಭೀಷ್ಟಾರ್ಥವನೀವನು 17

ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜನರಹೃತ್ಕುಮುದತಾಪಸಂಹರ್ತಸರಸ ಸುಧಾಂಶು ವಾಕ್ಯಾನ್ವಿತ ಸಿತಕರನಹುದಹುದಯ್ಯ ಧರೆಗೀತ 18

ಆವ ಪ್ರಾಣಿಯು ಗುರುಮಹಿಮೆಯ ಸದ್ಭಾವದಿ ನೆನೆಯಲು ಸುಖಿಯಾದದೇವ ಪ್ರಸನ್ವೆಂಕಟಾದ್ರೀಶ ಅವಗಾವಗೆ ಪಾಲಿಪ ಮಧ್ವೇಶ 19
***

inde kanDevu gururAyana namma
tande satyABinavatIrthana Palisa
bandodagitu namma sukRuta A
nandarasAbdhi ukkEritu ||pa||

idIge kalpadruma kANirai ahu
didIge cintAmaNi nODirai matti
didIge suraBi banditennirai tamma
mudadiMda yatirUpavAyitai ||1||

baDavara dore namma gururAya I
poDavili yAcakarASraya Apta
haDeda tAyitandEra maresida e
mmoDeya Bakti BAsava beLesida||2||

Bakti pathava nODi naDevanu yati
mukuTamaNige sarigANenu j~jAna
suKada baLLiya beLe beLesida sale
mukti maMdira vAtryaruhisida ||3||

ondondu guNagaLa mahimeyu ma
ttendige hogaLali tIravu
hindAda pUtaru aharu ya
tIndrana sAmyake sariyAru ||4||

guruBakti nele kaLe mareyade SrI
dharaje rAGavapAda jariyade dEva
varavEdavyAsana sEvege oM
daraGaLigyalasa tAnendige ||5||

honna tRuNadolu sUryADida vi
dyOnnatara tavarumaneyAda
mannipa sujanacakOrava horava
pUrNa candiranantalloppuva||6||

taptalAnCana tIrthavIvAga BRutya
rupaTaLakolidu nalivanAga
kapaTava lESamAtrariyanu intha
gupta mahimageNegANenu||7||

sakaLa purANOkta dAnava biDa
daKiLa dharmavanella mADuva
niKiLa tatvavanoredu hELuva I
akaLaMkanendU nammanu kAva ||8||

kaShTa maunadi vAraNAsiya bahu
SiShTara salahuta yAtreya mADi
tuShTi baDisidalli vAsara bEDi
diShTArthavanIvanu dAsara ||9||

pratidina gurupAdukeyaniTTu mEle
nUtana vasana honnArcanegiTTu munde
nutisi higguva navaBakutinda I
vratakAgalilla ondina kuMdu||10||

SrI BAgavata SAstra TIkanu hari
gABaraNava mADiTTanu
I BUmiliha SiShya janaranu tatva
SOBitaranu mADi horedanu||11||

baluhinda yavanana baladalli kRuShNa
oLapokku sadeda pariyalli
kalinRupa mlEcCana bandhana tapO
baladinda gururAya gelidanu||12||

Bakti virati j~jAna pUrNanu sE
vaka janarige prANapriyanu
prakaTisidanu nijakIrtiya nitya
sakala sadguNagaLa vArteya ||13||

I pari bahu paTTavALuta divya
SrIpAdavrata pUrNa tALuta
sthApisidanu madhvasiddhAnta duShTa
kApuruShara motta geddAta||14||

hariguNa jij~jAse yinda SrI
harimUrti dhyAna cintaneyinda SrI
harinAma smaraNaSravaNadinda SrI
hari prItibaDisida nalavinda ||15||

niruta udayasnAna maunava SrI
guru madhvaSAstravyAKyAnava mahA
gIrvANa vAkyadiMda pELuva Atma
gurugaLa smaraNeya mADuva||16||

guru satyanAthara tandanu nija
gurupadavE gatiyendanu tanna
smaraNEli ihara kAvanu bEDi
dare aBIShTArthavanIvanu||17||

gurusatyanAthAbdhi sanjAta sajja
nara hRutkumuda tApa saMharta
sarasa sudhAMSu vAkyAnvita sita
karanahudahudayya dharegIta ||18||

Ava prANiyu gurumahimeya sa
dBAvadi neneyalu suKiyAda
dEva prasanvenkaTAdrISa ava
gAvage pAlipa madhvESa ||19||
***