Showing posts with label ಕಾಯೋ ಕರುಣಾನಂದ ಶ್ರೀಗುರು ಕಾಯೊ mahipati. Show all posts
Showing posts with label ಕಾಯೋ ಕರುಣಾನಂದ ಶ್ರೀಗುರು ಕಾಯೊ mahipati. Show all posts

Thursday, 12 December 2019

ಕಾಯೋ ಕರುಣಾನಂದ ಶ್ರೀಗುರು ಕಾಯೊ ankita mahipati

ಕೇದಾರ ರಾಗ ಝಪ್ ತಾಳ

ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ
ಕಾಯೊ ಕರುಣಿಸಿ ಎನ್ನ ಪೂರ್ಣ ನೀ
ಕಾಯೊ ಪರಮನಿಧೆ ||ಧ್ರುವ||

ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿವೈರಾಗ್ಯವ
ದೃಢಗೊಳಿಸು ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ
ನಡೆಸಿ ನಿತ್ಯ ವಿವೇಕಪಥದಲಿ ಕೂಡಿಸೊ ನಿಜ ಸುಖಬೋಧವ
ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧||

ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ
ಗುಟ್ಟಿನೊಳು ನಿಜಘಟ್ಟಿಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ
ನಿಟಿಲನಯನ ಭ್ರೂಮಧ್ಯದೆರೆಸಿ ನೀ ಸಟೆಯ ಮಾಡೊ ಅವಿದ್ಯವ
ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯದ ||೨||

ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ಕಣ್ದೆರೆಸಿ ಅಣುರೇಣುದಲಿ ಪೂರ್ಣಖೂನದೋರೋ ಸಾಕ್ಷಾತವ
ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವವ
ಚಿಣ್ಣ ಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ ||೩||
***

ಕಾಖಂಡಕಿ ಶ್ರೀ ಮಹಿಪತಿರಾಯರು

ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಪ 


ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಜ್ಞಾನ ಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 

ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 

ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3

*****