Showing posts with label ನೊಂದೆನೊ ಭವದೊಳಗೆ ಗೋಪಾಲ ಇಂದು ನೀ ಕಾಯಬೇಕು ಗೋಪಾಲ shreesha keshava vittala. Show all posts
Showing posts with label ನೊಂದೆನೊ ಭವದೊಳಗೆ ಗೋಪಾಲ ಇಂದು ನೀ ಕಾಯಬೇಕು ಗೋಪಾಲ shreesha keshava vittala. Show all posts

Sunday, 1 August 2021

ನೊಂದೆನೊ ಭವದೊಳಗೆ ಗೋಪಾಲ ಇಂದು ನೀ ಕಾಯಬೇಕು ಗೋಪಾಲ ankita shreesha keshava vittala

 ..

kruti by shreesha keshava vittala dasaru (subbanna dasa)


ನೊಂದೆನೊ ಭವದೊಳಗೆ | ಗೋಪಾಲ |

ಇಂದು ನೀ ಕಾಯಬೇಕು | ಗೋಪಾಲ ಪ


ಸಿಂಧುಶಯನಯನ್ನ | ಕುಂದುಗಳೆಣಿಸದೆ |

ಬಂದು ನೀ ಸಲಹಬೇಕೋ | ಗೋಪಾಲಅ.ಪ


ನಾನಾಜನುಮದಿ | ನಾನಾರೂಪವ |

ನಾನೆನಿತಾಂತೆನೋ | ಮಾನನಿಧೇ ||

ಹೀನಜನರ ಕೂಡಿ | ನಾನರಿಯದೆ ನಿನ್ನ |

ಶ್ವಾನನಂತಾದೆನಲ್ಲೋ | ಗೋಪಾಲ 1


ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ |

ಇಳೆಯಭೋಗಕೆ | ಮನವೆಳೆದಿತೊಪ್ರಾಯ ||

ಕಳೆಯಲು ಪ್ರಾಯವು | ಗಳಿತುದು ಕಾಯ |

ಬಳಲುವೆನಿಳೆಯೊಳಗೆ | ಗೋಪಾಲ 2


ಸಿರಿಯತನದಿ ನಾ | ಮರೆಯುತ ನಿನ್ನನು |

ಪರಿಪರಿವಿಭವದಿ | ಮೆರೆದೆನೊ ಜೀಯ ||

ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ |

ಪೊರೆಯುವರಾರಿಹರೋ | ಕೃಪಾಳೋ 3


ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ |

ಉನ್ನತಮಹಿಮನೆ | ಘನ್ನಸಂಪನ್ನ ||

ಮುನ್ನಮಾಡಿದ | ಪರಾಧಗಳೆಣಿಸದೆ |

ಮನ್ನಿಪರಾರಿಹರೋ | ಮುರಾರೆ4


ಆಶಪಾಶಂಗಳು | ಬೀಸಿದ ಬಲೆಯೊಳು |

ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ ||

ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ |

ದಾಸನೆಂದೆನಿಸೊ ನಿನ್ನಾ | ಗೋಪಾಲ 5

***


ನೊಂದೆನೊ ಭವದೊಳಗೆ ಗೋಪಾಲ ಇಂದು ನೀ ಕಾಯಬೇಕು ಗೋಪಾಲ ankita shreesha keshava vittala

 .. ..

kruti by shreesha keshava vittala dasaru (subbanna dasa)


ನೊಂದೆನೊ ಭವದೊಳಗೆ | ಗೋಪಾಲ |

ಇಂದು ನೀ ಕಾಯಬೇಕು | ಗೋಪಾಲ ಪ


ಸಿಂಧುಶಯನಯನ್ನ | ಕುಂದುಗಳೆಣಿಸದೆ |

ಬಂದು ನೀ ಸಲಹಬೇಕೋ | ಗೋಪಾಲಅ.ಪ


ನಾನಾಜನುಮದಿ | ನಾನಾರೂಪವ |

ನಾನೆನಿತಾಂತೆನೋ | ಮಾನನಿಧೇ ||

ಹೀನಜನರ ಕೂಡಿ | ನಾನರಿಯದೆ ನಿನ್ನ |

ಶ್ವಾನನಂತಾದೆನಲ್ಲೋ | ಗೋಪಾಲ 1


ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ |

ಇಳೆಯಭೋಗಕೆ | ಮನವೆಳೆದಿತೊಪ್ರಾಯ ||

ಕಳೆಯಲು ಪ್ರಾಯವು | ಗಳಿತುದು ಕಾಯ |

ಬಳಲುವೆನಿಳೆಯೊಳಗೆ | ಗೋಪಾಲ 2


ಸಿರಿಯತನದಿ ನಾ | ಮರೆಯುತ ನಿನ್ನನು |

ಪರಿಪರಿವಿಭವದಿ | ಮೆರೆದೆನೊ ಜೀಯ ||

ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ |

ಪೊರೆಯುವರಾರಿಹರೋ | ಕೃಪಾಳೋ 3


ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ |

ಉನ್ನತಮಹಿಮನೆ | ಘನ್ನಸಂಪನ್ನ ||

ಮುನ್ನಮಾಡಿದ | ಪರಾಧಗಳೆಣಿಸದೆ |

ಮನ್ನಿಪರಾರಿಹರೋ | ಮುರಾರೆ4


ಆಶಪಾಶಂಗಳು | ಬೀಸಿದ ಬಲೆಯೊಳು |

ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ ||

ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ |

ದಾಸನೆಂದೆನಿಸೊ ನಿನ್ನಾ | ಗೋಪಾಲ 5

***