ನಾರಾಯಣ ಎನ್ನಿರೊ ಸಜ್ಜನರೆಲ್ಲ ಪ.
ಸಾರರಹಿತ ಸಂಸಾರದಲಿ ಪರಸಾರ ಇದು ಎಂದು ಸಂಸಾರಿ ನೀವೆಲ್ಲ ಅ.ಪ.
ಇಹಪರ ಸುಖವುಂಟೋ ಇದರ ಫಲಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದುಮಹಮಹಿಮೆ ಇದಲ್ಲದೆ ಮಹಿಮೆಯೊಳಗಿದುಮಹಾರಸವಾದಂಥ ಮಂತ್ರ ಮಹಭಕುತಿಪೂರ್ವಕವಾಗಿ ಒಮ್ಮೆ 1
ಹಸಿವೆಯ ಶ್ರಮವಿರಲಿ ಹಸಿವಿರದೆ ಹ-ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ-ನಸ ವಶವು ಆಗಲಿ ಆಗದಿರಲಿದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ 2
ಚೋರನೆಂದೆನದೆ ಚಿತ್ತದಲಿಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳಪಾರರಹಿತ ಅನರ್ಥಸಂಚಿತಹರಣ ಮಾಡುವ ಪವನ ಪ್ರಿಯ ಸರ್ವರಂತÀರ ಹಯವದನ 3
***
pallavi
nArAyaNa ennirO sajjanarella nArAyaNa ennirO
anupallavi
sArarahita samsAradali para sAra idu endu samsAri nIvella
caraNam 1
ihapara sukhavuNTO idara phala bahaLa kaTTida gaNTo ghanamahimage idu
mahamahime idallade mahimeyoLagidu mahArasavAdantha mantra maha bhakutipUrvakavAgi omme
caraNam 2
hasiveya shramavirali hasivirade haruShavu tAnirali rasikashrama keraLi mA
nasa vashavu Agali Agadirali dOSavAgali shuddhavAgali shrIshana mareyada hAge
caraNam 3
cOranendenade cittadali jAranendeNisade smaraNe mAtradi bahaLa pArarahita
anarthasancita haraNa mADuva pavana priya sarvarantara hayavadana
***