Showing posts with label ಶಂಕಿಸದಿರಿ ಜನರು ಸರ್ವದ vijaya vittala suladi ಅನ್ಯ ಮತ ನಿರಸನ ಸುಳಾದಿ SHANKISADIRI JANARU SARVADA ANYA MATA NIRASANA SULADI. Show all posts
Showing posts with label ಶಂಕಿಸದಿರಿ ಜನರು ಸರ್ವದ vijaya vittala suladi ಅನ್ಯ ಮತ ನಿರಸನ ಸುಳಾದಿ SHANKISADIRI JANARU SARVADA ANYA MATA NIRASANA SULADI. Show all posts

Sunday, 8 December 2019

ಶಂಕಿಸದಿರಿ ಜನರು ಸರ್ವದ vijaya vittala suladi ಅನ್ಯ ಮತ ನಿರಸನ ಸುಳಾದಿ SHANKISADIRI JANARU SARVADA ANYA MATA NIRASANA SULADI

ರಾಗ ಸೌರಾಷ್ಟ್ರ 
Audio by Mrs. Nandini Sripad

ರಾಗ ಸೌರಾಷ್ಟ್ರ 


ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಮಧ್ವಮತ ಸ್ತೋತ್ರ ಸುಳಾದಿ 

(ಶ್ರೀಹರಿನಾಮ ಮಹಿಮೆಯುಕ್ತ ಶ್ರೀಮಧ್ವಮತ ಸ್ತೋತ್ರ ಪೂರ್ವಕ ಅನ್ಯಮತ ನಿರಸನ) 

ರಾಗ ಸೌರಾಷ್ಟ್ರ 

ಧ್ರುವತಾಳ 

ಶಂಕಿಸದಿರಿ ಜನರು ಸರ್ವದಾ ಹರಿನಾಮ -
ಲಂಕಾರವೆನ್ನಿ ಮುಕ್ತಿಯೋಗ್ಯರಿಗೆ
ಪಂಕಜ ಸಂಭವಗೆ ಹರಿಗುಣ ತೋರಿದಷ್ಟು
ಶಂಕರಾದ್ಯಮರರಿಗೆ ತೋರದಯ್ಯಾ
ಡೊಂಕುಮಾನಿಸನವ ಕವನ ಪೇಳಬಲ್ಲನೆ
ಕೊಂಕುಗಳಲ್ಲದೆ ಆವದಿಲ್ಲಿ
ಪಂಕದೊಳಗೆ ಕ್ಯಾದಿಗೆ ಪುಟ್ಟಿ ಪೊಳೆದಂತೆ
ಪಂಕಜನಾಭನ್ನ ನಾಮಸ್ಮರಣೆ
ಪಂಕವುಳ್ಳವ ನಾನು ಚಿತ್ರವಾದ ಕೇತಕಿ
ಅಂಕುರಿಸಿದಂತೆ ಉದ್ಭವಿಸಿತು
ಕಿಂಕರ ನಾನು ಅನಂತ ಜನ್ಮಕ್ಕೆ ಚ -
ಕ್ರಾಂಕಿತರಾದ ಹರಿದಾಸರಿಗೆ 
ಸಾಂಕೇತ ಪರಿಹಾಸ್ಯ ಅಣಕದಿಂದಲಿ ಕೇಳೆ
ಸಂಕಟ ಪರಿಹಾರ ಮಹಭವದ
ಸಂಕೋಲೆ ಕಡೆದು ಎಂದಿಗೆ ಪೋಗದು ಸುಖ -
ಸಂಕುಲದೊಳಗೆ ಲೋಲ್ಯಾಡುವರು
ಕಂಕಣ ಚೂಡಾ ಸರಿಗಿ ಸರ್ವಾಭರಣ ನೋಡೆ
ಕುಂಕುಮದ ಬೆಲೆ ಅಲ್ಪವಾಗೆ ಅ -
ಲಂಕಾರದಲ್ಲಿಗೆ ಶೋಭಿಸುವುದು ಕಾ -
ಳಂಕ ಎಂದೆನಿಸೋದೆ ನೋಳ್ಪರಿಗೆ 
ಸಂಕರ ಮತವೆಂಬೊ ಮದಸೊಕ್ಕಿದಾನಿಗೆ ಭ -
ಯಂಕರವಾದುದಿದು ಮೃಗಶ್ರೇಷ್ಠನು 
ಬಿಂಕದ ಮಧ್ವಮತ ಕೇವಲ ಅನುಸರಿಸಿ
ಸಂಕೋಚವಾದರೂ ಸಮ್ಮತವು
ಲೆಂಕಾಧೀಶ ಪಾಲಾ ವಿಜಯವಿಟ್ಠಲನಂಘ್ರಿ 
ಸೋಂಕಿದ ದಾಸರ ಪಡಿ ತೊತ್ತುಗಳ ತೊತ್ತು ॥ 1 ॥ 

ಮಟ್ಟತಾಳ 

ಎಲವು ಶಂಖವು ಎರಡು ಬಿಳಪು ಎಂಬೊದು ಸಿದ್ಧ
ಕಲಿಯುಗದೊಳಗಿದು ಎಲ್ಲೆಲ್ಲರು ಬಲ್ಲರಯ್ಯಾ
ಎಲುವಿನೊಳಗೆ ತುಂಬಿ ಜಲವೆರೆದರೆ ಅದು 
ಸಲೆ ತೀರ್ಥವೆಂದು ಕೊಳಬಲ್ಲರೆ ಜನರು 
ಪೊಳೆವ ಶಂಖದಲ್ಲಿ ಜಲವನೆ ತಂದು ನಿರ್ಮಳದ ಗಂಡಕಿಯ 
ಶಿಲಿಗೆ ಎರೆದರೆ ತೀರ್ಥ ನಿಲುವರು ಅಹುದೆಂದು
ಸುಲಭ ಮನದಲ್ಲಿ ಹಿಂಗಳೆಯದೆ ಸೇವಿಸಿ 
ನಲಿ ನಲಿದಾಡುವರು ಹಲವು ಮತವ ಪೊಂದಿ 
ಘಳಿಗಿಯೊಳಗೆ ಕವನ ಬಲು ಪೇಳಿದರದು
ಎಲುವಿನೊಳಗೆ ಗಂಗಾಜಲ ತುಂಬಿದಂತೆ
ಫಲಕೆ ಬಾರದು ಕಾಣೊ ಬೆಲೆಗೆ ಸಲ್ಲದು ಕಾಣೊ
ಇಳಿಯೊಳಗೆ ಸಿದ್ಧ ಅಲವಬೋಧರ ಮತವೆ 
ಕಲುಷವಿಲ್ಲದಿರೆ ಜಲಜನಾಭನ ಕೃಪಾ -
ಜಲಧಿಯಾಗಿ ಎನ್ನ ಹಳಿಯೆ ಫಲಂಗಳು
ತಿಳಿದು ವೈಷ್ಣವ ಕುಲದಿ ನೆಲೆ ಮಾಡಿದನು ವ್ಯಾ-
ಕುಲವೆಲ್ಲ ಬಿಡಿಸಿ ಜಲಜದೊಳಗೆ ಗಂಗಾ -
ಜಲವನೆ ತಂದು ತುಂಬಿ ನೋಡಲು ಕಂ -
ಗಳಿಗೆ ವಪ್ಪಿತವಯ್ಯಾ ಬಲಾತ್ಕಾರವಲ್ಲಾ
ಸುಲಭ ಜನರು ಹರಿ ವೊಳಗೆ ಪ್ರೇರಿಸಿದರೆ 
ತಿಳಿದು ಮನ್ನಿಸುವುದು ತಳಮಳಗೊಳ್ಳದಲೆ 
ಬಲವಂತರ ಗುರು ವಿಜಯವಿಟ್ಠಲನ್ನ 
ಪೊಳವು ಅಪೇಕ್ಷಿಸುವ ವೊಲಿದು ಕೇಳಿದವ ॥ 2 ॥ 

ತ್ರಿವಿಡಿತಾಳ 

ಕನಕದ ಗುಂಡು ಪವಳ ಎರಡನು ತಂದು 
ಹೊಣಿಕೆಯಲ್ಲಿ ಇಟ್ಟು ಪೋಣಿಸಲು 
ಜನರಿಗೆ ಪೊಳೆವದು ಎಂದಿಗಾದರು ಮೋ -
ಹನ ಮಾಲೆಯಲ್ಲದೆ ಪ್ರತಿ ಪೆಸರೆ
ಎನಿಸೋದೆ ಆವಲ್ಲಿ ವೈದು ತೋರಿದರು
ಇನಿತಲ್ಲದೆ ಪಂಡಿತ ಪಾಮರ 
ಜನರೊಳಗೆ ಭೇದ ಮತಿಯುಂಟು ಪಂಡಿತ 
ಜನ ಬೆಲೆ ಬಲ್ಲದು ತಿಳಿಯರು ಪಾಮರರು
ಅನುದಿನದಲಿ ನಾನು ಪೇಳಿದ ಕವನ ಮೋ -
ಹನ ಮಾಲೆಯಂದದಿ ವೊಪ್ಪುತಿದೆ
ಮನುಜೋತ್ತಮರೆಲ್ಲ ಬೀಸಿ ಬೀಸಾಟದಲೆ 
ಅನುಗ್ರಹ ಮಾಡುವದು ತಪ್ಪು ತಿದ್ದಿ 
ಮನದೊಳು ಗುಣಿಸೋದು ಸಂಸ್ಕೃತ ಪ್ರಾಕೃತ -
ವನೆ ಪೇಳಿದದೆ ಮೋಹನ ಮಾಲೆಯೊ 
ಎಣೆಗಾಣೆ ಎನ್ನಯ ಗುರುಗಳ ಕರುಣಕ್ಕೆ 
ಮಣಿದು ನಮೊ ಎಂಬೆ ಮೂರು ಬಗೆ 
ಋಣಮೋಚನ ನಮ್ಮ ವಿಜಯವಿಟ್ಠಲರೇಯನ 
ಗುಣ ಕರ್ಮ ನಾಮಗಳು ನುಡಿದವ ಬಲು ಧನ್ಯ ॥ 3 ॥ 

ಅಟ್ಟತಾಳ 

ಚಂದ್ರನ ಒಳಗೆ ಕಳಂಕವಿರಲು ನೋಡಿ 
ಮಂದಿಯೊಳಗೆ ಬಲು ವಿವೇಕ ಉಳ್ಳವ -
ನೆಂದು ಓರ್ವನು ಎದ್ದು ನಿಚ್ಚಣಿಕೆಯನಿಟ್ಟು
ಅಂದಿಸಿಕೊಂಡು ಕಳಂಕ ತೆಗೆದು ಹಾಕಿ 
ಬಂದದಲ್ಲದೆ ಬಿಡನೆಂಬೊದು ಮಾತು 
ಒಂದಲ್ಲದೆ ಶಶಿ ಕಳಂಕ ಪೋಗೋದೆ
ಚೆಂದದಿಂದಲಿ ಹರಿ ನುಡಿಸಿದ ಕವಿತ್ವ 
ಮಂದಿಗೆ ಕಳಂಕವಾಗಿ ತೋರುತಿದೆ
ರಂಧ್ರ ಹುಡುಕುವಾಗೆ ಆವದಾದರು ಸೊಟ್ಟು
ತಂದು ಹಾಕುವನಲ್ಲದೆ ಸುಮ್ಮನಿರುವನೆ
ತಂದೆ ಮಾಡಿದ ಬದುಕು ಮಗನು ತಿಳಿಯೆ ಅ -
ನಂತ ವೇದಗಳಲ್ಲಿ ಪೇಳಿದ ವಚನಗ -
ಳೊಂದೊಂದು ಪರಿಯಿರಲು ತಿಳಿವರಾರು
ಸಂದೇಹ ಜನರಿಗೆ ತಮಯೋಗ್ಯರಿಗವ -
ರಂದದಿ ತೋರೋದು ಯಾವತ್ತು ಜನ್ಮಕ್ಕೆ
ಕಂದರ್ಪಪಿತ ನಮ್ಮ ವಿಜಯವಿಟ್ಠಲ ಹರಿಯ 
ಮಂದಮತಿ ಜನರು ಕೊಂಡಾಡಬಲ್ಲರೆ ॥ 4 ॥ 

ಆದಿತಾಳ 

ಸಕ್ಕರೆ ತೂರಿದರೆ ವಿಷ ಹೊರಡುವದೇನೊ
ಹೊಕ್ಕು ನೋಡಿದರೆ ಆಗಮವೆಲ್ಲ ತಿಳಿವದು
ಚಕ್ರಧರನ ದಯವುಳ್ಳವಗೆ ವಿಪರೀತ 
ದಕ್ಕುವದದರಿಂದ ಭೂಷಣ ಬಪ್ಪುದು
ಅರ್ಕಾದ್ರಿ ಮರೆಯಾಗೆ ರಾತ್ರಿಲಿ ದೀಪವ 
ಇಕ್ಕೆ ದ್ರವ್ಯ ಇದ್ದಲ್ಲಿ ಕತ್ತಲೆ ಬೀಳುವದು
ಮುಕ್ಕಣ್ಣ ಪರಿಯಂತ ಕಲಿಯ ವ್ಯಾಪಾರ ಯಾ -
ತಕ್ಕೆ ಅನುಮಾನ ಮಾನವರಿಗೆ ಸಿದ್ಧ
ಚಕ್ರಿಶಾಯಿ ನಮ್ಮ ವಿಜಯವಿಟ್ಠಲನ ಪಾ -
ದಕ್ಕೆ ನಮಿಸದವ ಸಂಶಯ ಬಡುವನು ॥ 5 ॥ 

ಜತೆ 

ಉತ್ತಮರಿಗೆ ನಾನು ಬಲು ನೀಚ ಬಲು ನೀಚ 
ಚಿತ್ತದೊಡಿಯ ವಿಜಯವಿಟ್ಠಲನೇ ಪ್ರೇರಕ ॥
***


ಶ್ರೀವಿಜಯರಾಯರ ವಿರಚಿತ
ಶ್ರೀ ಹರಿ ನಾಮ ಮಹಿಮೆಯುಕ್ತ ಶ್ರೀ ಮಧ್ವ ಮತಸ್ತೋತ್ರ ಪೂರ್ವಕ ಅನ್ಯ ಮತ ನಿರಸನ ಸುಳಾದಿ 

 ರಾಗ-  ಭೈರವಿ ಧ್ರುವತಾಳ 

ಶಂಕಿಸದಿರಿ ಜನರು ಸರ್ವದ ಹರಿನಾಮ| ಲಂಕಾರವೆನ್ನಿ ಮುಕ್ತಿ ಯೋಗ್ಯರಿಗೆ| ಪಂಕಜ ಸಂಭವಗೆ ಹರಿಗುಣ ತೋರಿದಷ್ಟು|ಶಂಕರಾದ್ಯಮರರಿಗೆ ತೋರದಯ್ಯಾ| ಡೊಂಕಮಾಣಿಸ ನವಕವನ
ಪೇಳಬಲ್ಲೆನೆ| ಕೊಂಕುಗಳಲ್ಲದೇ ಅವದಿಲ್ಲಿ| ಪಂಕದೊಳಗೆ ಕ್ಯಾದಿಗೆ ಪುಟ್ಟ
ಪೊಳೆದಂತೆ| ಪಂಕಜನಾಭನ್ನ ನಾಮಸ್ಮರಣೆ| ಪಂಕವುಳ್ಳವ ನಾನು 
ಚಿತ್ರವಾದ ಕೇತಕಿ| ಅಂಕುರಿಸಿದಂತೆ ಉದ್ಭವಿಸಿತು| ಕಿಂಕರ ನಾನು ಅನಂತ 
ಜನ್ಮಕ್ಕೆ ಚ| ಕ್ರಾಂಕಿತರಾದ ಹರಿದಾಸರಿಗೆ ಸಾಂಕೇತ ( ಪಾರಿ) ಪರಿಹಾಸ್ಯ 
ಅಣಕದಿಂದಲಿ ಕೇಳೆ| ಸಂಕಟ ಪರಿಹಾರ ಮಹಭವದ| ಸಂಕೋಲೆ ಕಡೆದು ಎಂದಿಗೆ ಪೋಗದು ಸುಖ |ಸಂಕುಲದೊಳಗೆ ಲೋಲ್ಯಾಡುವರು| ಕಂಕಣ ಚೂಡಾಸರಿಗಿ ಸರ್ವಾಭರಣನೋಡೆ| ಕುಂಕುಮದ ಬೆಲೆ ಅಲ್ಪವಾಗೆ ಅ| ಲಂಕಾರದಲ್ಲಿಗೆ ಶೋಭಿಸುವದು ಕಾಳಂಕ ಎಂದೆನಿಸೋದೆ ನೋಳ್ಪರಿಗೆ ಸಂಕರ ಮತವೆಂಬೊ ಮದಸೊಕ್ಕಿದಾನಿಗೆ    ಭ| ಯಂಕರ ವಾದದಿದು
ಮೃಗಶ್ರೇಷ್ಠನು | ಬಿಂಕದ ಮಧ್ವ ಮತ ಕೇವಲ ಅನುಸರಿಸಿ|ಸಂಕೋಚವಾದರು ಸಮ್ಮತವು| ಲೆಂಕಾಧೀಶ ಪಾಲಾ ವಿಜಯ ವಿಠ್ಠಲನಂಘ್ರಿ ಸೋಂಕಿದ ದಾಸರ ಪಡಿ ತೊತ್ತುಗಳ ತೊತ್ತು||೧||

ಮಟ್ಟತಾಳ 

ಎಲವು ಶಂಖವು ಎರಡು ಬಿಳಪು ಎಂಬೊದು ಸಿದ್ಧ|
ಕಲಿಯುಗದೊಳಗಿದು ಎಲ್ಲೆಲ್ಲರು ಬಲ್ಲರಯ್ಯಾ|ಎಲುವಿನೊಳಗೆ ತುಂಬಿ ಜಲವೆರಿದರೆ  ಅದು ಸಲೆ ತೀರ್ಥವೆಂದು ಕೊಳಬಲ್ಲರೆ ಜನರು  ಪೊಳೆವ ಶಂಖದಲ್ಲಿ ಜಲವನೆ ತಂದು ನಿರ್ಮಳದ ಗಂಡಕೀಯ | ಶಿಲಿಗೆ   
ಎರೆದರೆ ತೀರ್ಥನಿಲುವರು ಅಹುದೆಂದು| ಸುಲಭ ಮನದಲ್ಲಿ ಹಿಂಗಳೆಯದೆ ಸೇವಿಸಿ | ನಲಿ ನಲಿದಾಡುವರು| ಹಲವು ಮತವ ಪೊಂದಿ| ಘಳಿಗೆಯೊಳಗೆ ಕವನ ಬಲು ಪೇಳಿದರದು| ಎಲವಿನೊಳಗೆ ಗಂಗಾಜಲ ತುಂಬಿದಂತೆ| ಫಲಕೆ ಬಾರದು| ಕಾಣೊ ಬೆಲೆಗೆ ಸಲ್ಲದು ಕಾಣೊ| ಇಲೆಯೊಳಗೆ ಸಿದ್ಧ ಅಲವಬೋಧರ ಮತವೆ| ಕಲುಮಿಷವಿಲ್ಲದಿರೆ ಜಲಜನಾಭನ ಕೃಪಾ| ಜಲಧಿಯಾಗಿ ಎನ್ನ ಹಳಿಯೆ ಫಲಂಗಳು| ತಿಳಿದು ವೈಷ್ಣವ ಕುಲದಿ ನೆಲೆ
ಮಾಡಿದನು ವ್ಯಾ| ಕುಲವೆಲ್ಲ ಬಿಡಿಸಿ ಜಲಜದೊಳಗೆ ಗಂಗಾ| ಜಲವನೆತಂದು ತುಂಬಲು ನೋಡಲು ಕಂ| ಗಳಿಗೆ ವಷ್ಪಿತವಯ್ಯ ಬಲಾತ್ಕಾರವಲ್ಲ ಸುಲಭ ಜನರು ಹರಿ| ವೊಳಗೆ ಪ್ರೇರಿಸಿದರೆ ತಿಳಿದು ಮನ್ನಿಸುವದು| ತಳಮಳಗೊಳ್ಳದಲೆ ಬಲವಂತರ ಗುರು ವಿಜಯ ವಿ| ಠ್ಠಲನ್ನ ಪೊಳವು ಅಪೇಕ್ಷಿಸುವ ವೊಲಿದು ಕೇಳಿದವ ||೨||

ತ್ರಿವಿಡಿತಾಳ

ಕನಕದ ಗುಂಡು ಪವಳ ಎರಡನೆ ತಂದು ಹೊಣಿಕೆಯಲ್ಲಿ ಇಟ್ಟು ಪೋಣಿಸಲು ಜನರಿಗೆ ಪೊಳೆವದು ಎಂದಿಗಾದರು ಮೊ|  ಹನ ಮಾಲೆಯಲ್ಲದೆ ಪ್ರತಿ ಪೆಸರೆ|  ಎನಿಸೋದೇ ಆವಲ್ಲಿ ವೈದು ತೋರಿದರೆ| ಇನಿತಲ್ಲದೆ ಪಂಡಿತ ಪಾಮರ ಜನರೊಳಗೆ ಭೇಧ ಮತಿವುಂಟು ಪಂಡಿತ ಜನ ಬೆಲೆಬಲ್ಲದು ತಿಳಿಯದು ಪಾಮರರು| ಅನುದಿನದಲಿ ನಾನು ಪೇಳಿದ ಕವನ ಮೋ| ಹನ ಮಾಲೆಯೆಂದದಿ ವೊಪ್ಪುತ್ತಿದೆ| ಮನುಜೋತ್ತಮರೆಲ್ಲ ಬೀಸಿ ಬೀಸಾಟದಲೆ ಅನುಗ್ರಹ ಮಾಡುವದು ತಪ್ಪು ತಿದ್ದಿ | ಮನದೊಳು ಗುಣಿಸೋದು ಸಂಸ್ಕೃತ ಪ್ರಾಕೃತ | ವನೆಪೆಳಿದರೆ ಮೋಹನ ಮಾಲೆಯೊ ಎಣೆಗಾಣೆ ಎನ್ನಯ ಗುರುಗಳ ಕರುಣಕ್ಕೆ ಮಣಿದು ನಮೊ ಎಂದೆ ಮೂರು ಬಗೆ ಋಣ ಮೋಚನ ನಮ್ಮ ವಿಜಯ ವಿಠ್ಠಲರೇಯನ ಗುಣ ಕರ್ಮನಾಮಗಳು ನುಡಿದವ ಬಲು ಧನ್ಯ||೩||

ಅಟ್ಟತಾಳ 

ಚಂದ್ರನ ಒಳಗೆ ಕಳಂಕವಿರಲು | ನೋಡಿ ಮಂದಿಯೊಳಗೆ ಬಲು ವಿವೇಕ ಉಳ್ಳವ| ನೆಂದು ಓರ್ವನು ಎದ್ದು ನಿಚ್ಚಣಿಕೆಯನ್ನಿಟ್ಟು| ಅಂದಿಸಿಕೊಂಡು ಕಳಂಕ ತೆಗೆದು ಹಾಕಿ ಬಂಡದಲ್ಲದೆ ಬಿಡನೆಂಬೊದು ಮಾತು ಒಂದಲ್ಲದೆ ಶಶಿಕಳಂಕ ಪೋಗೋದೆ| ಚೆಂದದಿಂದಲಿ ಹರಿನುಡಿಸಿದ ಕವಿತ್ವ | ಮಂದಿಗೆ ಕಳಂಕವಾಗಿ ತೋರುತಿದೆ| ರಂಧ್ರ ಹುಡುಕುವಾಗೆ ಆವದಾದರು ಸೊಟ್ಟು| ತಂದು ಹಾಕುವನಲ್ಲದೆ ಸುಮ್ಮನಿರುವನೆ| ತಂದೆ ಮಾಡಿದ ಬದಕು ಮಗನು ತಿಳಿಯೆ ಅ| ನಂತ ವೇದಗಳಲ್ಲಿ ಪೇಳಿದವಚನ ಗ| ಳೊಂದೊಂದು ಪರಿ ಇರಲು ತಿಳಿವರಾರು| ಜನ್ಮಕ್ಕೆ ಕಂದರ್ಪ ಪಿತ ನಮ್ಮ ವಿಜಯವಿಠ್ಠಲ ಹರಿಯ | ಮಂದಮತಿ ಜನರು ಕೊಂಡಾಡಬಲ್ಲರೆ||೪||

ಆದಿತಾಳ 

ಸಕ್ಕರೆ ತೂರಿದರೆ ವಿಷ ಹೊರಡುವದೇನೊ| ಹೊಕ್ಕು ನೋಡಿದರೆ ಆಗಮವೆಲ್ಲ ತಿಳಿವದು| ಚಕ್ರಧರನ ದಯವುಳ್ಳವಗೆ ವಿಪರೀತ ದಕ್ಕುವದರಿಂದ ಭೂಷಣ ಬಪ್ಪುದು| ಅರ್ಕಾದ್ರಿ ಮೊರೆಯಾಗೆ ರಾತ್ರಿಲಿ ದೀಪವ | ಇಕ್ಕೆ ದ್ರವ್ಯ ಇದ್ದಲ್ಲಿ ಕತ್ತಲೆ ಬೀಳುವದು| ಮುಕ್ಕಣ್ಣ ಪರಿಯಂತ ಕಲಿಯ ವ್ಯಾಪಾರ ಯಾ| ತಕ್ಕೆ ಅನುಮಾನ ಮಾನವರಿಗೆ ಸಿದ್ಧ| ಚಕ್ರಿಶಾಯಿ ನಮ್ಮ ವಿಜಯ ವಿಠ್ಠಲನ ಪಾ| ದಕ್ಕೆ ನಮಿಸದವ ಸಂಶಯ ಬಡುವದನಕ||೫||

 ಜತೆ

ಉತ್ತಮರಿಗೆ ನಾನು ಬಲುನೀಚ ಬಲುನೀಚ |
ಚಿತ್ತದೋಡಿಯ ವಿಜಯ ವಿಠ್ಠಲನೇ ಪ್ರೇರಕ ||೬||
ರಾಜಾರಾಂ, ಗುಂತಕಲ್ಲು.
****