ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡು ಮನವೆ ಸದ್ಭಕ್ತಿ ನೋಡು ನಿನ್ನೊಳು ಸುಮುಕ್ತಿ ಪ
ನೀಡಿ ತನುಮನ ಧನ ಕೂಡು ನೀ ಸದ್ಗುರುವಿನ ನೋಡು ನಿನ್ನೊಳಗೆ ಖೂನ ಗೂಢ ನಿಜಧನ 1
ಪಿಡಿದು ಸದ್ಗುರು ಪಾದ ಬಿಡದೆ ನೋಡು ನೀ ಸದಾ ತಡೆದು ಕಾಮಕ್ರೋಧ ಪಡಿಯೋ ಸುಬೋಧ 2
ಸದ್ಗುರು ಸುಪಥ ನೋಡು ನೀ ಸದೋದಿತ ಮೂಢ ಮಹಿಪತಿ ಮನವೆ ನಿನ್ನ ಸ್ವಹಿತ 3
***