by ಗಲಗಲಿ ಅವ್ವನವರು
ಕೋಲೆನ್ನಿ ಕೋಮಲೆಯರು ಅಮ್ಮಯ್ಯ
ಮುಯ್ಯ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ ।।ಪ॥
ಇಂದು ಗುರುಗಳಂಘ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯ ರಚಿಪೆನಕ್ಕಯ್ಯ ।।೧।।
ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ ।।೨।।
ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ
ಭಾವೆ ಚರ್ಚಾ ಮಾತುಗಳನ್ನೆ ರಚಿಪೆನಕ್ಕಯ್ಯ ।।೩।।
ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ
ರುಕ್ಮಿಣಿ ನಕ್ಕು ನುಡಿದ ನುಡಿಯ ರಚಿಪೆನಕ್ಕಯ್ಯ ।।೪।।
ನಮ್ಮ ಗುರುಗಳಂಘ್ರಿಗೆರಗಿ ಅಮ್ಮಯ್ಯ
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ ।।೫।।
*****
ಕೋಲೆನ್ನಿ ಕೋಮಲೆಯರು ಅಮ್ಮಯ್ಯ
ಮುಯ್ಯಿ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ ಪ.
ಇಂದು ಗುರುಗಳಂಫ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯಿ ರಚಿಪೆÀನಕ್ಕಯ್ಯ 1
ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ 2
ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ
ಭಾವೆ ಚರ್ಚಾ ಮಾತುಗಳನ್ನೆ ರಚಿಸೆ ನಕ್ಕಯ್ಯ 3
ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ
ರುಕ್ಮಿಣಿ ನಕ್ಕುನುಡಿದ ನುಡಿಯ ರಚಿಪೆನಕ್ಕಯ್ಯ 4
ನಮ್ಮ ಗುರುಗಳಂಫ್ರಿಗೆರಗಿ ಅಮ್ಮಯ್ಯ
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ 5
****