..
ಶ್ರೀಗುರು ಜಯೇಶವಿಠಲನೆ ಪಾಲಿಸಯ್ಯ
ಈ ಸತಿಯ ಕರಪಿಡಿದು ಪ
ಸರ್ವಮಂಗಳ ಮೂರ್ತಿ ಸರ್ವೇಶ ಶರ್ವಸಖ
ಸರ್ವತ್ರ ಒಡನಿದ್ದು ಸಲಹು ಸತತ
ಉರ್ವಿಯಲಿ ಸತ್ಕೀರ್ತಿ ಸಂಪದದಿ ನಿಲಿಸಿವಳ
ನಿವ್ರ್ಯಾಜದಲಿ ಪೊರೆಯೊ ನಿತ್ಯ ತೃಪ್ತ 1
ಗುಣವಂತಳನು ಮಾಡು ಗುಣ ಗಣಾಂಬುಧಿ ದೇವ
ಘನವೆನಿಸು ಈ ಸತಿಯ ಸಂಸಾರವೆಲ್ಲ
ಅನಿಲ ಜನರಲಿ ನಿಲಿಸು ಅನುಕೂಲ ನೀನಾಗಿ
ದನುಜಾರಿ ಸಂಪದವ ಹರುಷದಲಿ ಬೆಳೆಸುವುದು 2
ಶೀಲ ಭಕ್ತಿ e್ಞÁನ ಸತತ ಸಜ್ಜನ ಸಂಘ
ಮೇಲಾಗಿ ನೀಡುವುದು ಮೈದುನನ ಸೂತ
ಪಾಲುಸಾಗರದೊಡೆಯ ಜಯೇಶವಿಠಲನೆ
ಕೊರತೆ ಇಲ್ಲದೆ ನೀಡು ಕಲ್ಯಾಣ ಈ ಸತಿಗೆ 3
***