Thursday, 5 August 2021

ಶ್ರೀಗುರು ಜಯೇಶವಿಠಲನೆ ಪಾಲಿಸಯ್ಯ ankita jayesha vittala

 ..

ಶ್ರೀಗುರು ಜಯೇಶವಿಠಲನೆ ಪಾಲಿಸಯ್ಯ

ಈ ಸತಿಯ ಕರಪಿಡಿದು ಪ


ಸರ್ವಮಂಗಳ ಮೂರ್ತಿ ಸರ್ವೇಶ ಶರ್ವಸಖ

ಸರ್ವತ್ರ ಒಡನಿದ್ದು ಸಲಹು ಸತತ

ಉರ್ವಿಯಲಿ ಸತ್ಕೀರ್ತಿ ಸಂಪದದಿ ನಿಲಿಸಿವಳ

ನಿವ್ರ್ಯಾಜದಲಿ ಪೊರೆಯೊ ನಿತ್ಯ ತೃಪ್ತ 1


ಗುಣವಂತಳನು ಮಾಡು ಗುಣ ಗಣಾಂಬುಧಿ ದೇವ

ಘನವೆನಿಸು ಈ ಸತಿಯ ಸಂಸಾರವೆಲ್ಲ

ಅನಿಲ ಜನರಲಿ ನಿಲಿಸು ಅನುಕೂಲ ನೀನಾಗಿ

ದನುಜಾರಿ ಸಂಪದವ ಹರುಷದಲಿ ಬೆಳೆಸುವುದು 2


ಶೀಲ ಭಕ್ತಿ e್ಞÁನ ಸತತ ಸಜ್ಜನ ಸಂಘ

ಮೇಲಾಗಿ ನೀಡುವುದು ಮೈದುನನ ಸೂತ

ಪಾಲುಸಾಗರದೊಡೆಯ ಜಯೇಶವಿಠಲನೆ

ಕೊರತೆ ಇಲ್ಲದೆ ನೀಡು ಕಲ್ಯಾಣ ಈ ಸತಿಗೆ 3

***


No comments:

Post a Comment